ಬಂಟ್ವಾಳ: ಜಿಲ್ಲೆಯ ಅತ್ಯಂತ ಕಾರಣಿಕ ಪ್ರಸಿದ್ದ ದೈವ ಕ್ಷೇತ್ರವಾದ ಪಣೋಲಿಬೈಲು ಕಲ್ಲುರ್ಟಿ ಕ್ಷೇತ್ರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹರಕೆ ಕೋಲವನ್ನು ಭಾನುವಾರ ರಾತ್ರಿ ಸಲ್ಲಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಯು.ಟಿ. ಕಾದರ್ ಅವರು ದೈವಸ್ಥಾನಕ್ಕೆ ಭೇಟಿ ನೀಡಿ ಸಂಪ್ರದಾಯ ಬದ್ದವಾಗಿ ಕೋಲ ನೆರವೇರಿದ್ದರು. ಸ್ವತಃ ಖಾದರ್ ಅವರೇ ದೈವಗಳಿಗೆ ಹೂವಿನ ಹಾರವನ್ನು ಹಾಕಿ ಶ್ರದ್ದೆಯಿಂದ ಪಾಲ್ಗೊಂಡಿದ್ದರು.
ಆಕ್ಷೇಪ:
ಯು.ಟಿ. ಖಾದರ್ ಅವರು ಪಣೋಲಿಬೈಲು ಕೋಲದಲ್ಲಿ ಭಾಗಿಯಾಗಿರುವ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಧಾರ್ಮಿಕ ಮುಖಂಡರೋರ್ವರು ತನ್ನ ಸಾಮಾಜಿಕ ಜಾಲಾತಾಣದಲ್ಲಿ ಖಾದರ್ ಹಿಂದೂ ಸಂಪ್ರದಾಯದ ಭೂತರಾಧನೆಯಲ್ಲಿ ಭಾಗವಹಿಸಿರುವುದಕ್ಕೆ ಕಿಡಿ ಕಾರಿದ್ದಾರೆ.
Advertisement