ಬಂಟ್ವಾಳ: ಟೋಲ್ಗೇಟ್ ಮೂಲಕ ವಾಹನಗಳು ಹಾದು ಹೋದರೆ ಫಾಸ್ಟ್ಯಾಗ್ ಮೂಲಕ ಖಾತೆಯಿಂದ ಹಣ ಕಡಿತಗೊಂಡು ಸುಂಕ ವಸೂಲಿಯಾಗುವುದು ಸಾಮಾನ್ಯ. ಆದರೆ ವಾಹನ ಮನೆಯಲ್ಲಿದ್ದರೂ ಕೂಡ ಟೋಲ್ಗೇಟ್ನಲ್ಲಿ ಹಣ ಪಾವತಿಯಾಗಿ ಖಾತೆಯಿಂದ ಮೊತ್ತ ಕಡಿತವಾದರೆ ಹೇಗೆ?
ಇಂತಹವೊಂದು ಅಚಾತುರ್ಯ ನಡೆದಿದ್ದು, ಕಾರು ಚಾಲಕರೊಬ್ಬರು ಈ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಟ್ವಾಳದ ಉದ್ಯಮಿ ದೇಜಪ್ಪ ಪೂಜಾರಿ ಎಂಬವರು ಮಂಗಳವಾರ ತನ್ನ ಮನೆಯಲ್ಲಿಯೇ ಇದ್ದು ಕಾರನ್ನು ಎಲ್ಲಿಗೂ ಕೊಂಡು ಹೋಗಿರಲಿಲ್ಲ. ಆಧರೂ ಕೂಡ ಮಧ್ಯಾಹ್ನ 12.20 ರ ವೇಳೆಗೆ ಬ್ರಹ್ಮರಕೂಟ್ಲು ಟೋಲ್ ಗೇಟ್ನಿಂದ ಸುಂಕ ವಸೂಲಿಯಾಗಿ 30ರೂಪಾಯಿ ಕಡಿತಗೊಂಡಿರುವ ಮೆಸೆಜ್ ಬಂದಿದೆ. ಈ ಹಿಂದೆಯೊಮ್ಮೆ ಅವರು ಕಾರ್ಯ ನಿರ್ಮಿತ್ತ ಚೆನ್ನೈಗೆ ಹೋಗಿದಾಗಲೂ ಖಾತೆಯಿಂದ ಹಣ ಕಡಿತಗೊಂಡು ಸುಂಕ ಪಾವತಿಯಾಗಿರುವ ಮೆಸೆಜ್ ಬಂದಿತ್ತು. ಆಗಲೂ ಮನೆಯವರನ್ನು ವಿಚಾರಿಸಿದಾಗ ಕಾರು ಮನೆಯಲ್ಲಿಯೇ ಇತ್ತು. ಮಂಗಳವಾರ ಹಣ ಕಡಿತವಾಗುತ್ತಿದ್ದತೆಯೇ ಟೋಲ್ಗೇಟ್ಗೆ ಧಾವಿಸಿದ ಅವರು ಪರಿಶೀಲಿಸುವಂತೆ ತಿಳಿಸಿದಾಗ ಟೋಲ್ ಸಿಬ್ಬಂದಿಗಳು ಹಣ ವಾಪಸು ನೀಡಲು ಬಂದಿದ್ದಾರೆ. ಅದನ್ನು ನಿರಾಕರಿಸಿದ ದೇಜಪ್ಪ ಪೂಜಾರಿಯವರು ವಾಹನ ಮನೆಯಲ್ಲಿದ್ದರೂ ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ. ಟೋಲ್ ಹೆಸರಿನಲ್ಲಿ ಖಾತಯಿಂದ ಹಣ ಎಗರಿಸುವ ತಂತ್ರ ಎಂದು ಆರೋಪಿಸಿದ್ದಾರೆ.
—