ಬಂಟ್ವಾಳ : ಬಂಟ್ವಾಳ ಟೈಲರ್ಸ್ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಜ.15ರಂದು ಸೋಮವಾರ ಬೆಳಿಗ್ಗೆ 9ಕ್ಕೆ ಉದ್ಘಾಟನೆಗೊಳ್ಳಲಿದೆ.
ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸುವರು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜ ಸೇಫ್ ಲಾಕರ್ ಉದ್ಘಾಟಿಸುವರು.ಸಂಘದ ಅಧ್ಯಕ್ಷ ಎಂ. ನಾಗೇಶ್ ಅಧ್ಯಕ್ಷತೆ ವಹಿಸುವರು. ವಕೀಲ ಅಶ್ವನಿ ಕುಮಾರ್ ರೈ ದೀಪ ಪ್ರಜ್ವಲಿಸುವರು.
ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕ ಎಚ್ ಎನ್. ರಮೇಶ್, ಕೆಎಸ್ಟಿಎ ರಾಜ್ಯಾಧ್ಯಕ್ಷ ನಾರಾಯಣ ಬಿ. , ದ.ಕ.ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಅಧ್ಯಕ್ಷ ಸುಭಾಷ್ ಚಂದ್ರ ಜೈನ್, ಸಮಾಜ ಸೇವ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಗಣೇಶ ಕಾರಂತ, ಗೀತಾ ಕಲ್ಯಾಣ ಮಂಟಪದ ಅಧ್ಯಕ್ಷ ಸುರೇಶ್ ನಾಯಕ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಮತ್ತು ಕೆಎಸ್ಟಿಎ ರಾಜ್ಯ ಉಪಾಧ್ಯಕ್ಷ ರೋ। ಸುರೇಶ್ ಸಾಲಿಯಾನ್ ಉದ್ಯಮಿ ಹಂಝ ಬಸ್ತಿಕೋಡಿ, ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿ’ಸೋಜ ಅಧ್ಯಕ್ಷರು ಜನಜಾಗೃತಿ ವೇದಿಕೆ ಬಂಟ್ವಾಳ, ಉದ್ಯಮಿಗಳಾದ ಸುಧಾಕರ ಆಚಾರ್ಯ
ಮಂಜುನಾಥ ಆಚಾರ್ಯ ಭಾಗವಹಿಸಲಿದ್ದಾರೆ.