ಬಂಟ್ವಾಳ: ತುಂಬೆಯ ಗುಲಾಬಿ ಶೆಟ್ಟಿ ಎಜುಕೇಷನ್ ಮತ್ತು ಸರ್ವೀಸ್ ಟ್ರಸ್ಟ್ ಅಧೀನದ ದಿವೀಶ್ ಫ್ರೀ- ಪ್ರೈಮರಿ ಶಾಲೆಯ ವಾರ್ಷಿಕೋತ್ಸವ ನಡೆಯಿತು.
ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಟ್ರಸ್ಟ್ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆಯ ಸಂಚಾಲಕಿ ಉಷಾ ಚಂದ್ರಪ್ರಕಾಶ್ ಶೆಟ್ಟಿ,ಟ್ರಸ್ಟಿ ಸುಕನ್ಯಾ ಶೆಟ್ಟಿ ಹಾಜರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಸ್ವಾತಿಶ್ರೀ , ಸಹ ಶಿಕ್ಷಕಿ ಉಷಾ ಸಹಕರಿಸಿದರು. ಸಹ ಶಿಕ್ಷಕಿ ರುಬೀನಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Advertisement