
ಕರ್ನಾಟಕ ಜೂಡೋ ಸಂಸ್ಥೆ ಬೆಂಗಳೂರು ಇದರ ಆಶ್ರಯದಲ್ಲಿ ಬೆಂಗಳೂರು ನಗರ ಜಿಲ್ಲಾ ಜೂಡೋ ಸಂಸ್ಥೆ ಮತ್ತು ಡಿಬಿಕೆಡಿಓ ಜೈನ್ ವಿಕ್ಕಂ ಸಂಯೋಜನೆಯಲ್ಲಿ ನ.29 ಮತ್ತು 30 ರಂದು ನಡೆದ 41ನೇ ಕರ್ನಾಟಕ ರಾಜ್ಯ ಸಬ್ ಜ್ಯೂನಿಯರ್ ಮತ್ತು ಮಿನಿ ಜೂಡೋ ಚಾಂಪಿಯನ್ ಶಿಪ್ 2023-24 ರಲ್ಲಿ ಆಳ್ವಾಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ತನ್ಮಯ್ ಪಿ.ಶೆಟ್ಟಿ 66 ಕೆ.ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾನೆ. ಈತ ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾನೆ.

