
ಬಂಟ್ವಾಳ: ತಾಲೂಕು ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ, ನ್ಯಾಯವಾದಿ ಶೈಲಜಾ ರಾಜೇಶ್ ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರವ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಮಹಿಳಾ ಸಮಿತಿಯ ಅಧ್ಯಕ್ಷೆ ರೇವತಿ ಬಡಗಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು.


ಉಪಾಧ್ಯಕ್ಷರಾಗಿ ರಾಗಿಣಿ, ಕಾರ್ಯದರ್ಶಿಯಾಗಿ ರಶ್ಮಿ ಸತೀಶ್
ಜತೆ ಕಾರ್ಯದರ್ಶಿಯಾಗಿ ಸರೋಜಿನಿ ಖಜಾಂಚಿಯಾಗಿ ಸುಜಾತಾ ದಿನೇಶ್ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಮಾಜಿ ಅಧ್ಯಕ್ಷರಾದ ನಯನ, ಮಾಲತಿ, ಭಾರತಿ ಕುಂದರ್, ಜಯಲಕ್ಷ್ಮಿ ಸೇರಿದಂತೆ ಬಿಲ್ಲವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭವಾನಿ ಸ್ವಾಗತಿಸಿದರು, ಕಾರ್ಯದರ್ಶಿ ಲಲಿತಾ ವಂದಿಸಿದರು.