ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಂಟ್ವಾಳ ತಾಲೂಕು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಧನಂಜಯ ಶೆಟ್ಟಿ ಇವರೊಂದಿಗೆ ಸಮಾಲೋಚನೆಯನ್ನು ಪಾಣೆಮಂಗಳೂರು ಬಂಗಲೆಗುಡ್ಡೆ ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಎಮ್. ಸುಬ್ರಹ್ಮಣ್ಯ ಭಟ್, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳ ಗುತ್ತು, ತಾಲೂಕು ಕಾರ್ಯದರ್ಶಿ ಸುದೇಶ ಮಯ್ಯ, ಜಿಲ್ಲಾ ವಕ್ತಾರ ದಯಾನಂದ ಶೆಟ್ಟಿ, ಮಹಿಳಾ ಸಂಚಾಲಕಿ ವಿಲ್ಮ ಪ್ರಿಯ ಅಲ್ಬುಕರ್ಕ್ ಉಪಸ್ಥಿತರಿದ್ದರು. ತುಂಬೆ ಡ್ಯಾಂ ಸವಕಳಿ ಪ್ರದೇಶದ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸುವ ಬಗ್ಗೆ ರೈತರ ಕುಮ್ಕಿ ಹಕ್ಕಿನ ಬಗ್ಗೆ, ತುಂಬೆ ಡ್ಯಾಮ್ ಸಂತ್ರಸ್ತ ರೈತರಿಗೆ ಒರತೆ ಭೂಮಿಗೆ ಪರಿಹಾರ ಒದಗಿಸುವ ಬಗ್ಗೆ, ನದಿ ತೀರದ ರೈತರ ಪಂಪ್ ಸೆಟ್ಗಳ ವಿದ್ಯುತ್ ಶಕ್ತಿ ನಿರ್ಬಂಧಿಸಿ ಜಿಲ್ಲಾಧಿಕಾರಿಗಳ ಆದೇಶ ರದ್ದತಿ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲು ತೀರ್ಮಾನಿಸಲಾಯಿತು.
Advertisement
Advertisement