
ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ, ಇದರ ಬಂಟ್ವಾಳ ವಲಯದ 27ನೇ ವಾರ್ಷಿಕ ಸಭೆಯು ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ವಲಯಧ್ಯಕ್ಷ ರಾಜೇಂದ್ರ ಕೆ. ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, ಎಸ್ಕೆಪಿಎ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಉದ್ಘಾಟಿಸಿದರು. ವಲಯದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ, ಜಿಲ್ಲೆಯ ಸಾಂತ್ವನ (ವಿಮೆ) ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್,
ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಏನ್. ಜಿಲ್ಲಾ ಉಪಾಧ್ಯಕ್ಷ ದೇವರಾಜ್ ಶೆಟ್ಟಿ, ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್, ಎಸ್ಕೆಪಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಹರೀಶ್ ರಾವ್, ಗೌರವಾಧ್ಯಕ್ಷ ಕಿಶೋರ್ ಕುಮಾರ್. ವಲಯದ ಉಪಾಧ್ಯಕ್ಷರಾದ ಹರೀಶ್ ನಾಟಿ ಹಾಗು ರೋಷನ್ ಕಲ್ಲಡ್ಕ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರವಿ ಕಲ್ಪನೆ ೨೦೨೫-೨೬ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, ಕೋಶಾಧಿಕಾರಿ ಕೃಷ್ಣರಾಜ್ ರಾವ್ ಲೆಕ್ಕಪತ್ರ ಮಂಡಿಸಿದರು. ಪಿಯುಸಿ ಮತ್ತು ಎಸ್ಎಸ್ಎಲ್ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಲಯದ ಸದಸ್ಯ ರ ಮಕ್ಕಳಿಗೆ ವಿದ್ಯಾನಿಧಿ ಯನ್ನು ನೀಡಿ ಗೌರವಿಸಲಾಯಿತು.
ವಲಯದ ಗೌರವಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ, ರೋಷನ್ ಕಲ್ಲಡ್ಕ ವಂದಿಸಿದರು. ದಯಾನಂದ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.
Advertisement







