
ಬಂಟ್ವಾಳ: ಔಷಧಿ,ಪೌಷ್ಢಿಕಾಹಾರದ ಸೇವನೆಯೊಂದಿಗೆ ಆತ್ಮವಿಶ್ವಾಸ ಇದ್ದಾಗ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ. ಜನರು ಆರೋಗ್ಯವಂತರಾದಾಗ ದೇಶದ ಅಭಿವೃದ್ಧಿಗೆ ಸಾಧ್ಯವಿದೆ. ಇದು ಒಂದು ರೀತಿಯ ದೇಶಸೇವೆಯಾಗಿದ್ದು ಪ್ರಧಾನಿಯ ಕ್ಷಯ ಮುಕ್ತ ಭಾರತ ನಿರ್ಮಾಣ ಸಂಕಲ್ಪಕ್ಕೆ ನಮ್ಮ ಕೊಡುಗೆ ನೀಡಿದಂತಾಗುತ್ತದೆ
ಎಂದು ಉಜಿರೆ ಎಸ್.ಡಿ. ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜಯಕುಮಾರ್ ಶೆಟ್ಟಿ ಹೇಳಿದರು.
ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ಸೇವಾಂಜಲಿ ಸಭಾಗ್ರಹದಲ್ಲಿ ಕ್ಷಯ ರೋಗಿಗಳಿಗೆ ಆಹಾರ- ದವಸಧಾನ್ಯ ವಿತರಿಸಿ ಮಾತನಾಡಿದರು.
ಜನರಿಗೆ ಸೇವೆ ನೀಡುವುದಲ್ಲದೆ ಅವರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ನಿರಂತರವಾಗಿ ಮಾಡಿಕೊಂಡಿ ಬರುತ್ತಿದೆ. ಸರಕಾರದ ಮಹತ್ವಕಾಂಕ್ಷೆ ಯೋಜನೆಯನ್ನು ಸಮಾಜದ ಅರ್ಹರಿಗೆ ತಲುಪಿಸುವ ಕಾರ್ಯವನ್ನು ಸೇವಾಂಜಲಿ ಪ್ರತಿಷ್ಠಾನ ಮಾಡುತ್ತಿದೆ ಎಂದರು.

ಎನಪೋಯ ವೈದ್ಯಕೀಯ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಮಾಳವಿಕ ಮಾತನಾಡಿ ದ.ಕ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸುವ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾತ್ರ ಮಾಡುತ್ತಿದೆ. ಪ್ರತಿ ತಿಂಗಳು ಕ್ಷಯ ರೋಗಿಗಳನ್ನು ಗುರುತಿಸಿ ಆಹಾರದ ಕಿಟ್ ವಿತರಿಸುವ ಮಾದರಿ ಕಾರ್ಯ ಸೇವಾಂಜಲಿ ಸಂಸ್ಥೆಯಿಂದ ಆಗುತ್ತಿದೆ ಎಂದರು.
ಮಂಚಿಯ ಇಂದಿರಾದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ಉಮ್ಮರ್ ಬಿ.ಮಂಚಿ ಮಾತನಾಡಿದರು.
ಮುಖ್ಯ ಅತಿಥಿ ದಸ್ತವೇಜು ಬರಹಗಾರ ಟಿ. ಗಣೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 4 ವರ್ಷಗಳಿಂದ 258 ರೋಗಿಗಳನ್ನು ದತ್ತುಪಡೆದು ಈವರೆಗೆ ಒಟ್ಟು 16 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಕ್ಷಯ ರೋಗಿಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಪ್ರಕಾಶ್ ಕಿದೆಬೆಟ್ಟು, ಹರೀಶ್ ಪೂಜಾರಿ
ತನುಷ್ ಶೆಟ್ಟಿ, ಉಮಾ ಚಂದ್ರಶೇಖರ್
ಪ್ರಶಾಂತ್ ತುಂಬೆ, ಶೇಖರ ಕಲ್ಲತಡಮೆ, ಹರೀಶ್ ಕಡೆಗೋಳಿ, ಮಧುರಾಜ್ ಶೆಟ್ಟಿ ಉಪಸ್ಥಿತರಿದ್ದರು.
Advertisement







