ಬಂಟ್ವಾಳ: ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ಇಲ್ಲಿ ಸಮಾಜ ವಿಜ್ಞಾನ ಹಾಗೂ ಚುನಾವಣಾ ಸಾಕ್ಷರತಾ ಸಂಘದ ಆಶ್ರಯದಲ್ಲಿ ಮಾದರಿ ಚುನಾವಣೆ ಪ್ರಕ್ರಿಯೆ ಮೂಲಕ ನೂತನ ಶಾಲಾ ಸರಕಾರವನ್ನು ರಚಿಸಲಾಯಿತು. ವಿದ್ಯಾರ್ಥಿಗಳೆಲ್ಲರೂ ಆಧಾರ್ ಕಾರ್ಡ್ ಆಧಾರದಲ್ಲಿ ಮತ ಚಲಾಯಿಸಿ ಚುನಾವಣೆ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಮಂತ್ರಿಯಾಗಿ ಸಿಯಾಬುದ್ದೀನ್ ತಾಳಿತ್ತನೂಜಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಅನ್ಸಿರಾ ನಾರ್ಶ ಆಯ್ಕೆಗೊಂಡರು.
ಶಾಲಾ ಮುಖ್ಯ ಶಿಕ್ಷಕಿ ಲತಾ ಮಂಗಳೂರು ಇವರು ಪ್ರಮಾಣ ವಚನ ಬೋಧಿಸಿದರು. ಸಮಾಜ ವಿಜ್ಞಾನ ಸಂಘದ ನೋಡಲ್ ಸರೋಜಮ್ಮ ಬಿ.ಸಿ.ರೋಡ್ ರವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸಹಶಿಕ್ಷಕರಾದ ಅಬ್ದುಲ್ ರಫೀಕ್ ಉಪ್ಪಿನಂಗಡಿ , ಗೋಪಾಲಕೃಷ್ಣ ನೇರಳಕಟ್ಟೆ , ಶರತ್ ಕುಮಾರ್ ಚೌಟ ದೇವಸ್ಯ, ಶುಭ ಮೊಡಂಕಾಪು , ಭಾರತಿ ಸಿ ಕೈರಂಗಳ , ಅನಿಲ್ ಕುಮಾರ್ ಕಲ್ಲಡ್ಕ ಸಹಕರಿಸಿದರು.
2023 – 24 ನೇ ಸಾಲಿನ ಮಂತ್ರಿಮಂಡಲಕ್ಕೆ ಸ್ಪೀಕರ್ – ನಿಹಾಲ್ ಬೋಳಂತೂರು , ವಿರೋಧ ಪಕ್ಷದ ನಾಯಕಿ -ರಾಯಿಸಾ ತಾಳಿತ್ತನೂಜಿ , ಗೃಹ ಮಂತ್ರಿ – ಅನ್ವಿತಾ ನಾರ್ಶ , ಶಿಕ್ಷಣ ಮಂತ್ರಿ – ಶಹೀರಾ ಸೆರ್ಕಳ , ನೀರಾವರಿ ಮಂತ್ರಿ – ಚೇತನ್ ನಾರ್ಶ , ಕ್ರೀಡಾ ಮಂತ್ರಿ – ಶಿಫಾನ ನಾರ್ಶ, ಆರೋಗ್ಯ ಮಂತ್ರಿ – ಸಬಿದಾ ತಾಳಿತ್ತನೂಜಿ, ಸಾಂಸ್ಕೃತಿಕ ಮಂತ್ರಿ – ರಿಹಾನ ಬೋಳಂತೂರು , ಆಹಾರ ಹಾಗೂ ಸ್ವಚ್ಚತೆ ಮಂತ್ರಿ – ಮಿಶ್ರಿಯಾ ಸೆರ್ಕಳ ಆಯ್ಕೆಯಾದರು.