
ಬಂಟ್ವಾಳ: ತುಂಬೆಯ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ಆಶ್ರಯದಲ್ಲಿ ತುಂಬೆಯ ರಾಮಲ್ ಕಟ್ಟೆಯಲ್ಲಿ ನಿರ್ಮಾಣಗೊಂಡ ನೂತನ ಶ್ರೀಶಾರದಾ ಸಭಾಭವನ ಹಾಗೂ ಆ ಬಳಿಕ ಎರಡು ದಿನಗಳ ಕಾಲ ನಡೆದ ಶ್ರೀ ಶಾರದೋತ್ಸವದ ಬಗ್ಗೆ ಅವಲೋಕನ ಸಭೆ ಭಾನುವಾರ ಶ್ರೀ ಶಾರದಾ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವ ಸುವರ್ಣ ಪೇರ್ಲಬೈಲು, ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು, ಪೊಳಲಿ ಗಿರಿ ಪ್ರಕಾಶ್ ತಂತ್ರಿ ಸಮಿತಿ ಪ್ರಮುಖರಾದ ಶೋಭಾ ಮೈಂದನ್
ರಾಮಚಂದ್ರ ಸುವರ್ಣ, ವಿನೋದ್ ಬೊಳ್ಳಾರಿ
ದಿವಾಕರ ಪೇರ್ಲಬೈಲು ಉಪಸ್ಥಿತರಿದ್ದರು. ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿ ಅನಿಸಿಕೆ ವ್ಯಕ್ತ ಪಡಿಸಿದರು. ಸಂತೋಷ್ ಕೋಟ್ಯಾನ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.


Advertisement







