ಬಂಟ್ವಾಳ: ಭಕ್ತರಿದ್ದರೆ ಮಾತ್ರ ದೇವರು, ಗುರುಹಿರಿಯರ ಆಶೀರ್ವಾದವಿದ್ದಾಗ ಮಾತ್ರ ದೇವರು ಒಲಿಯುತ್ತಾರೆ ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಬಂಟ್ವಾಳ ತಾಲೂಕಿನ ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಮೇ.20 ರಿಂದ 25ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಟಾ ಬ್ರಹ್ಮಕಲಶದ ಪ್ರಯುಕ್ತ ಭಾನುವಾರ ದೇವಳದ ವಠಾರದಲ್ಲಿ ಕಾರ್ಯಾಲಯವನ್ನು ಉದ್ಘಾಟಿಸಿ ಬಳಿಕ ಬ್ರಹ್ಮಕಲಶದ ಆಮಂತ್ರಣಪತ್ರ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮಧ್ಯಮ ವರ್ಗ ಮತ್ತು ಬಡವರೇ ಪ್ರಸಕ್ತ ದಿನಗಳಲ್ಲಿ ದೇವಸ್ಥಾನ, ದೈವಸ್ಥಾನಗಳ ಪುನರ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ತುಳುನಾಡಿನಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನಗಳು ಹೆಚ್ಚು, ಹೆಚ್ಚು ಬ್ರಹ್ಮಕಲಶೋತ್ಸವಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದ ಶ್ರೀಗಳು ಭದ್ರಕಾಳಿ ದೇವಿ ಕರುಣಾಮಯಿಯಾಗಿದ್ದು ಇಲ್ಲಿನ ಬ್ರಹ್ಮಕಲಶವವು ಕೂಡ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದರು. ಪುನರ್ನಿರ್ಮಾಣ ಸಮಿತಿ ಪ್ರಧಾನ ಸಂಚಾಲಕ ತೇವು ತಾರನಾಥ ಕೊಟ್ಟಾರಿ ಅವರು ಮಾತನಾಡಿ ವಹಿಸಿಕೊಂಡ ಜವಾಬ್ದಾರಿ ಅರಿತುಕೊಂಡು ಅವರವರು ಕಾರ್ಯನಿರ್ವಹಿಸಿದಾಗ ಯಶಸ್ಸು ಸಿಗಲಿದೆ ಎಂದರು.
ಪುನರ್ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ಪಿ.ಶೆಟ್ಟಿ ಮೊಡಂಕಾಪುಗುತ್ತು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ದೇವಳದ ಜೀಣೋದ್ದಾರ ಕಾರ್ಯದಲ್ಲಿ ಸರ್ವ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಧರ್ಮದರ್ಶಿ ರಮೇಶ್ ಬಿ.ಬೆಂಜನಪದವು, ಶ್ರೀ ಭದ್ರಕಾಳೀ ಸೇವಾಸಮಿತಿ ಗೌರವಾಧ್ಯಕ್ಷ ಈಶ್ವರ ಬೆಳ್ಚಡ ಬೆಂಜನಪದವು,
ಪ್ರ.ಕಾರ್ಯದರ್ಶಿ ಚಂದ್ರಶೇಖರ ಸುವರ್ಣ, ಶ್ರೀ ಗುಳಿಗಪಾತ್ರಿ ಬಾಬುಕೊಟ್ಟಾರಿ ವಳಚ್ಚಿಲ್, ಪುನರ್ನಿರ್ಮಾಣ ಸಮಿತಿ ಪ್ರ.ಕಾರ್ಯದರ್ಶಿ ಉಮೇಶ್ ಸಾಲಿಯಾನ್, ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಉಮೇಶ್ ಸಾಲ್ಯಾನ್, ಯುವ ವೇದಿಕೆ ಗೌರವಾಧ್ಯಕ್ಷ ಸಂದೀಪ್ ಬಿ., ಅಧ್ಯಕ್ಷ ಭರತ್ ರಾಜ್, ಸಮಿತಿ ಪದಾಧಿಕಾರಿಗಳಾದ ರಾಮಚಂದ್ರ ಮಾರಿಪಲ್ಲ, ದಾಮೋದರ ಕೋಟ್ಯಾನ್ ತುಂಗ, ಚಿತ್ತರಂಜನ್, ಸದಾಶಿವ ಮೊಯಿಲಿ, ದಯಾನಂದ ತುಂಬೆ, ಡಾ.ಸತೀಶ್ ಕುಮಾರ್ ವಿವಿಧ ಘಟಕಗಳ ಹಾಗೂ ಉಪಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬ್ರಹ್ಮಕಲಶ ಸಮಿತಿ ಪ್ರ.ಕಾರ್ಯದರ್ಶಿ ಬಿ.ಜರ್ನಾಧನ ಅಮ್ಮುಂಜೆ ಸ್ವಾಗತಿಸಿ, ವಂದಿಸಿದರು.