
ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮೊಗರ್ನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ವಿಶೇಷ ಮಹಾಪೂಜೆಯನ್ನು ಬಿಜೆಪಿಯ ಅಮ್ಟೂರು ಶಕ್ತಿ ಕೇಂದ್ರ ವತಿಯಿಂದ ಸಲ್ಲಿಸಲಾಯಿತು.
ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ನೇತೃತ್ವದಲ್ಲಿ ಶಕ್ತಿಕೇಂದ್ರದ ಕಾರ್ಯಕರ್ತರು ಆಗಮಿಸಿ ನೆಟ್ಲದ ಶ್ರೀ ನೀಟಿಲಾಕ್ಷ ಸದಾಶಿವ ದೇವರಿಗೆ ವಿಶೇಷ ಮಹಾಪೂಜೆ, ನಿತ್ಯ ಪೂಜೆ, ರುದ್ರಾಭಿಷೇಕ, ಕುಂಕುಮಾರ್ಚನೆ ನೆರವೇರಿಸಿ ನರೇಂದ್ರ ಮೋದಿಯವರಿಗೆ ದೀರ್ಘಾಯುಷ್ಯ ಉತ್ತಮ ಆಯುರಾರೋಗ್ಯ ಹಾಗೂ ದೇಶವನ್ನು ಮುನ್ನಡೆಸಲು ಅಗತ್ಯವಿರುವ ಅಪಾರ ಶಕ್ತಿ ಸಾಮರ್ಥ್ಯವನ್ನು ಭಗವಂತನು ಕರುಣಿಸಲಿ, ದೇಶದ ಪ್ರಗತಿ ಸುರಕ್ಷತೆ ಮತ್ತು ಪ್ರತಿಯೊಬ್ಬ ಪ್ರಜೆಯ ಕಲ್ಯಾಣಕ್ಕಾಗಿ ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ದೈವಿಕ ಮಾರ್ಗದರ್ಶನ ಹಾಗೂ ಆಶೀರ್ವಾದ ಸದಾ ಇರಲಿ ವಿಶ್ವಗುರು ಭಾರತದ ಕನಸು ನನಸಾಗಲಿ ನವ ಭಾರತದಲ್ಲಿ ನಿರ್ಮಾಣಕ್ಕಾಗಿ ಮತ್ತು ಭಾರತವನ್ನು ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿ ಮಾಡಲು ಅವರು ಕೈಗೊಂಡಿರುವ ಮಹತ್ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಇನ್ನಷ್ಟು ವರ್ಷಗಳ ಕಾಲ ದೇಶ ಸೇವೆ ಮಾಡಲು ಅವರಿಗೆ ಶಕ್ತಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಲಾಯಿತು.


ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ರಾವ್ ಪೂಜಾಕಾರ್ಯ ನೆರವೇರಿಸಿದರು.
ಈ ಸಂದರ್ಭ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪ್ರಭಾಕರ ಶೆಟ್ಟಿ ಬೈದರಡ್ಕ, ಮಹಾಬಲ ಸಾಲಿಯನ್ ಮುಳಿಕೊಡಂಗೆ, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಕುಮಾರ್, ಪ್ರಮುಖರಾದ ನವೀನ್ ಕೊಟ್ಟಾರಿ, ಗಂಗಾಧರ ಕುಲಾಲ್, ಉಗ್ಗಪ್ಪ ಪೂಜಾರಿ, ಸೇಸಪ್ಪ ನಾಯ್ಕ್, ಧನಂಜಯ ಕುಮಾರ್, ನಾರಾಯಣ ಗಟ್ಟಿ, ಸಂಜೀವ ನಾಯ್ಕ್, ವಿಜಯಕುಮಾರ್, ನಿಶಾಂತ್ ಡಿ ಅಮ್ಟೂರು ಮತ್ತಿತರರು ಉಪಸ್ಥಿತರಿದ್ದರು
Advertisement







