
ಬಂಟ್ವಾಳ: ಜೆಸಿಐ ಬಂಟ್ವಾಳದ ಜೆಸಿ ಸಪ್ರಾಹದ ಸಮಾರೋಪ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಡಾ.ಎಂ.ಎಸ್. ಭಟ್ ಹಾಗೂ ಮೆಸ್ಕಾಂ ಬಂಟ್ವಾಳ ಉಪವಿಭಾಗದ ಅಕೌಂಟ್ ಆಫೀಸರ್ ಚಂದ್ರಶೇಖರ ಎಂ. ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಸಂಯೋಜಕ ಸದಾನಂದ ಬಿ. ಬಂಗೇರ ಅವರನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಜೆಸಿಐ ಭಾರತದ ಪೂರ್ವ ಜಿಎಲ್ ಸಿ ಸೌಜನ್ಯ ಹೆಗಡೆ, ವಲಯ ನಿರ್ದೇಶಕಿ ಗಾಯತ್ರಿ ಲೋಕೇಶ್, ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಉಮೇಶ್ ಆಚಾರ್ ಸಂಚಯಗಿರಿ, ಭಾಗವಹಿಸಿದ್ದರು. ವೇದಿಕೆಯಲ್ಲಿ ಜೆಸಿಐ ಬಂಟ್ವಾಳದ ನಿಕಟ ಪೂರ್ವಾಧ್ಯಕ್ಷ ಗಣೇಶ್ ಕೆ. ಕುಲಾಲ್, ಕಾರ್ಯದರ್ಶಿ ಕಿರಣ್ ಬಂಟ್ವಾಳ, ಕೋಶಾಧಿಕಾರಿ ಶಿವರಾಮ ಮರ್ತಾಜೆ, ಲೇಡಿ ಜೆಸಿ ಸಂಯೋಜಕಿ ಅನುಷಾ ಕಿಶೋರ್ ಉಪಸ್ಥಿತರಿದ್ದರು.


ಏಳು ದಿನ ವಿವಿಧ ಕಾರ್ಯಕ್ರಮ:
ಜೇಸಿ ಸಪ್ತಾಹದ ಮೊದಲನೇ ದಿನ ಸಾಯಲೀಲ ಹೋಟೆಲ್ ಬಳಿ ಆಟೋರಿಕ್ಷಾ ಚಾಲಕರಿಗೆ ಪರಿಸರ ಸ್ನೇಹಿ ಸ್ಟೀಲ್ ಬಾಟಲ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ವಲಯ ನಿರ್ದೇಶಕಿ ಗಾಯತ್ರಿ ಲೋಕೇಶ್ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಯಿತು. ಎರಡನೇ ದಿನ ಬಂಟ್ವಾಳ ಕಾಮಾಜೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಯಿಸುಮಾ ನಾವಡ ನಾಯಕತ್ವದ ಬಗ್ಗೆ ತರಬೇತಿ ಕಾರ್ಯಗಾರ ನಡೆಸಿಕೊಟ್ಟರು. ಮೂರನೇ ದಿನ ಸರಕಾರಿ ಪದವಿ ಕಾಲೇಜಿನಲ್ಲಿ ಜೆಸಿಐ ಇಂಡಿಯಾ ಪಿಟಿಷನ್ ಗೆ ಸಹಿ ಸಂಗ್ರಹ ಅಭಿಯಾನ ನಡೆಯಿತು. ನಾಲ್ಕನೇ ದಿನದ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನಲ್ಲಿ ವ್ಯವಹಾರ ಬಗ್ಗೆ ಚರ್ಚೆ ನಡೆಯಿತು. ಐದನೇ ದಿನದ ಕಾರ್ಯಕ್ರಮದ ಅಂಗವಾಗಿ ಜೆಸಿಐ ಬಂಟ್ವಾಳಕ್ಕೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಆರನೇ ದಿನದ ಅಂಗವಾಗಿ ಜೆಸಿಐ ಬಂಟ್ವಾಳದ ಸದಸ್ಯರಿಗೆ ಕುಟುಂಬೋತ್ಸವ ನಡೆಸಲಾಯಿತು. ಏಳನೇ ದಿನದ ಅಂಗವಾಗಿ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಲಾಯಿತು.
Advertisement







