
ಬಂಟ್ವಾಳ: ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿ ಝಿ ನ್ಯೂಸ್ ಕನ್ನಡ ಕೊಡಮಾಡುವ ರಾಜ್ಯಮಟ್ಟದ “ಕರ್ನಾಟಕ ಐಡಲ್ ಅವಾರ್ಡ್- 2026 ಪ್ರಶಸ್ತಿಗೆ ಉದ್ಯಮಿ, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ
ಕೆ. ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರಿನ ದಿ ಲಲಿತ್ ಅಶೋಕ್ ನಲ್ಲಿ ಭಾನುವಾರ ಸಂಜೆ ನಡೆದೆ ಅದ್ದೂರಿ ಸಮಾರಂಭದಲ್ಲಿ ಸಂಜೀವ ಪೂಜಾರಿ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಕಾಡಸಿದ್ದೇಶ್ವರ ಮಠದ ಅಜ್ಜಯ್ಯ ಮಹಾಸ್ವಾಮಿಗಳು, ರಾಜ್ಯ ಅರಣ್ಯ, ಪರಿಸರ ಸಚಿವ ರಾಮಲಿಂಗರೆಡ್ಡಿ, ಆರೋಗ್ಯ ಸಚಿವ ಯು.ಟಿ.ಖಾದರ್, ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಸಂತೋಷ್ ಎಸ್. ಲಾಡ್, ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್, ಚಿತ್ರನಟಿ ಶುಭ ಪೂಂಜ, ಶಾಸಕ ಶೈಲೇಂದ್ರ , ಪ್ರಮುಖರಾದ ಮಾಧವ ಕಿರಣ್
ಲತಾ ಜೈ ಪ್ರಕಾಶ್, ಝೀ ನ್ಯೂಸ್ ಕನ್ನಡ ಸಂಪಾದಕ ಸಂಪಾದಕ ರವಿ ತೇಜಾ ಎಸ್. ಉಪಸ್ಥಿತರಿದ್ದರು.
ಉದ್ಯಮ ಹಾಗೂ ಸಹಕಾರಿ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದೆ.

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಹಾಗೂ ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾದುದು. ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿ ಕೊಂಡಿದ್ದಾರೆ.
Advertisement







