
ಬಂಟ್ವಾಳ: ಪ್ರತಿಷ್ಠಿತ ಸುದ್ದಿ ವಾಹಿನಿ ಝಿ ನ್ಯೂಸ್ ಕನ್ನಡ ಕೊಡಮಾಡುವ ರಾಜ್ಯಮಟ್ಟದ “ಕರ್ನಾಟಕ ಐಡಲ್ ಅವಾರ್ಡ್- 2026 ಪ್ರಶಸ್ತಿಗೆ ಹೊಟೇಲ್ ಉದ್ಯಮಿ ಸದಾನಂದ ಬಿ. ಬಂಗೇರ ಮೊಡಂಕಾಪು ಆಯ್ಕೆಯಾಗಿದ್ದಾರೆ.
ಉದ್ಯಮ ಕ್ಷೇತ್ರದ ಸಾಧನೆ ಹಾಗೂ ಸಮಾಜಮುಖಿ ಸೇವೆಗಾಗಿ ಈ ಪ್ರಶಸ್ತಿ ಲಭಿಸಿದ್ದು ಸೆ.16 ರಂದು ಬೆಂಗಳೂರಿನ ದಿ ಲಲಿತ್ ಅಶೋಕ್ ನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಬಿ.ಸಿ.ರೋಡಿನ ಕೈಕಂಬದಲ್ಲಿ ಹೊಟೇಲ್ ಸಾಯಿಲೀಲಾ ಹಾಗೂ ಸಾಯಿರಾವ್ ಕ್ಯಾಟರಿಂಗ್ ಸರ್ವಿಸ್ ನಡೆಸುತ್ತಿರುವ ಸದಾನಂದ ಬಂಗೇರ ಅವರು ಜೆಸಿಐ ಬಂಟ್ವಾಳ ಸಂಸ್ಥೆಯ ಮೂಲಕ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಮನೆ ದುರಸ್ತಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು, ಬಡ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ನೆರವು, ಶಾಲೆ ಕಾಲೇಜುಗಳಿಗೆ ಕಲಿಕೆಗೆ ಪೂರಕವಾಗುವ ವಸ್ತುಗಳ ಕೊಡುಗೆಯನ್ನು ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇವರ ಈ ಎಲ್ಲಾ ಸಾಧನೆ ಹಾಗೂ ಸೇವಾಕಾರ್ಯವನ್ನು ಪರಿಗಣಿಸಿ ಝೀ ನ್ಯೂಸ್ ಕನ್ನಡ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ತಿಳಿದು ಬಂದಿದೆ.
Advertisement







