
ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ನ. 23ರಂದು ನೂತನ ಅನ್ನಛತ್ರ ಲೋಕಾರ್ಪಣೆ ಮತ್ತು ನ.25ರಂದು ವರ್ಷಾವಧಿ ಕೋಲ ಕಾರ್ಯಕ್ರಮ ನಡೆಯಲಿದೆ.

23ರಂದು ಬೆಳಗ್ಗೆ 10.30ಕ್ಕೆ ನೂತನ ಅನ್ನಛತ್ರ ಕಟ್ಟಡದ ಲೋಕಾರ್ಪಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6ರಿಂದ ದೀಪೋಜ್ವಲನ, ಕುಣಿತ ಭಜನೆ, ಸ್ವರತರಂಗ, ರಾತ್ರಿ 8ರಿಂದ ಪರಮಾತ್ಮ ಪಂಜುರ್ಲಿ ನಾಟಕ, 8.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ನ.24ರಂದು ಸಂಜೆ 7.30ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8ರಿಂದ ಪಾವಂಜೆ ಮೇಳದವರಿಂದ ‘ಲಲಿತೋಪಾಖ್ಯಾನ’ ಯಕ್ಷಗಾನ
ಬಯಲಾಟ. 25ರಂದು ಬೆಳಗ್ಗೆ 8ರಿಂದ ನವಕ ಕಲಶ ಪ್ರಧಾನ, ಗಣಹೋಮ, ನಾಗತಂಬಿಲ ಹಾಗೂ ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 2ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಹಾಗೂ ಸಂಜೆ 6ಕ್ಕೆ ಶ್ರೀಕೃಷ್ಣ ಮಂದಿರದಿಂದ ಕ್ಷೇತ್ರಕ್ಕೆ ಭವ್ಯ ಮೆರವಣಿಗೆ, ಸಂಜೆ 6ರಿಂದ ಶ್ರೀ ಗೆಜ್ಜೆಗಿರಿ ಮೇಳದವರಿಂದ ‘ಗಜೇಂದ್ರ ಮೋಕ್ಷ ರಕ್ತರಾತ್ರಿ’ ಯಕ್ಷಗಾನ ಬಯಲಾಟ. ರಾತ್ರಿ 10ರಿಂದ ಲಕುಮಿ ತಂಡದ ಕುಸಾಲ್ಪ ಕಲಾವಿದೆರ್ ಅಭಿನಯಿಸುವ ಹೊಸ ತುಳು ನಾಟಕ ‘ಚಂದ್ರಾವತಿ’ ಪ್ರದರ್ಶನಗೊಳ್ಳಲಿದೆ. ರಾತ್ರಿ 10.30ಕ್ಕೆ ಭಂಡಾರದ ಮನೆಯಿಂದ ದೈವಗಳ ಭಂಡಾರ ತರುವುದು, ರಾತ್ರಿ 11ಕ್ಕೆ ಕಲ್ಲುರ್ಟಿ ದೈವದ ವರ್ಷಾವಧಿ ಕೋಲ ನಡೆಯಲಿದೆ ಎಂದು ಕಾರ್ಯ ನಿರ್ವ ಹಣಾಧಿಕಾರಿ ದಿವಾಕರ ಮುಗುಳ್ಳ ತಿಳಿಸಿದ್ದಾರೆ.
Advertisement







