
ಬಂಟ್ವಾಳ: ಜನ ಸಾಮಾನ್ಯರಿಗೆ ಆರ್ಥಿಕ ಉನ್ನತಿ ಕೊಡಬೇಕು,ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವಕಾಶವನ್ನು ನೀಡುವ ಮೂಲಕ ಜನಪರ ಸೇವೆ ನೀಡಬೇಕು ಎನ್ನುವ ಉದ್ದೇಶದಿಂದ ಡಾ. ಅಮ್ಮೆಂಬಳ ಬಾಳಪ್ಪ ಹಾಗೂ ಹೂವಯ್ಯ ಮೂಲ್ಯನವರು ಅಂದು ಸ್ಥಾಪಿಸಿದ ಸಮಾಜ ಸೇವಾ ಸಹಕಾರಿ ಸಂಘ ಇಂದು ಅದೇ ಉದ್ದೇಶದಲ್ಲಿ ಮುಂದುವರಿಯುತ್ತಿರುವುದು ಅಭಿನಂದನೀಯ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಉಳ್ಳಾಲ ತಾಲೂಕಿನ ಬೋಳಿಯಾರಿನ ಶ್ರೀ ದೇವಿಕಿರಣ್ ಸಂಕೀರ್ಣದಲ್ಲಿ ಸಮಾಜ ಸೇವಾ ಸಹಕಾರಿ ಸಂಘ ನಿ. ಇದರ 18 ನೇ ಬೋಳ್ಯಾರ್ ಶಾಖೆಯನ್ನು ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಇಂದು ಸಮಾಜ ಸೇವಾ ಸಹಕಾರಿ ಸಂಘ ಪ್ರಗತಿಯ ಹಾದಿಯಲ್ಲಿದ್ದು ಹೆಚ್ಚಿನ ಶಾಖೆಗಳು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಸ್ಥಿತಿಗೆ ಅಭಿವೃದ್ದಿಯಾಗಿದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಪ್ರಾಮಾಣಿಕ ಸೇವೆ ನೀಡಿದಾಗ ಸತ್ಯ ಖಂಡಿತವಾಗಿಯೂ ಪ್ರಕಾಶಕ್ಕೆ ಬರುತ್ತದೆ. ಬ್ಯಾಂಕ್ ಮುಂದಿನ ಪೀಳಿಗೆಯ ಸಮಾಜದ ಸಂಪತ್ತು. ಇದನ್ನು ಈ ಪೀಳಿಗೆಯ ಜನರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಮ್ಮೆಂಬಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜರಾಮ ಭಟ್ ಭದ್ರತಾ ಕೊಠಡಿ ಉದ್ಘಾಟಿಸಿದರು.

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಠೇವಣಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಗ್ರಾಹಕರೊಂದಿಗೆ ಇಟ್ಟುಕೊಂಡಿರುವ ಉತ್ತಮ ಸಂಬಂಧದಿಂದಾಗಿ ಇಂದು ಸಂಘ ಉನ್ನತಿಯ ಹಾದಿಯಲ್ಲಿದೆ. ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಸಮಾಜ ಸೇವಾ ಸಹಕಾರಿ ಸಂಘ ಕೊಡುಗೆ ನೀಡುತ್ತಿದ್ದು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಸಹಕಾರಿ ಸಂಘ ಎಂದು ಅಭಿಪ್ರಾಯ ಪಟ್ಟರು.
ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಬೋಳಿಯಾರಿನಲ್ಲಿ ಹೊಸ ಶಾಖೆ ಆರಂಭಗೊಂಡಿದ್ದು ಗ್ರಾಹಕರು ಠೇವಣಾತಿ ನೀಡಿ, ಸಾಲಪಡೆದು ಸಂಘದ ಅಭಿವೃದ್ದಿಗೆ ಸಹಕರಿಸುವಂತೆ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಕಟ್ಟಡ ಮಾಲಕ ಕೇಶವ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಅಮೂಲ್ಯ ಸ್ವಸಹಾಯ ಸಂಘಗಳನ್ನು ಅಭಿನಂದಿಸಲಾಯಿತು.
ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬೋಳಿಯಾರ್ ಎಂ ಜೆ ಎಂ ಮಸೀದಿ ಅಧ್ಯಕ್ಷ ಪಿ.ಕೆ. ಅಬ್ದುಲ್ಲ, ಮಂಗಳೂರು ತಾ.ಪಂ. ಸದಸ್ಯ ಬಿ.ಕೆ. ಅಬ್ದುಲ್ ಜಬ್ಬಾರ್, ಬೋಳ್ಯಾರು ಗ್ರಾ.ಪಂ. ಅಧ್ಯಕ್ಷ ಶಕೂರು, ಮೆಸ್ಕಾಂ ನಿವೃತ್ತ ಎಂ.ಡಿ. ಮಂಜಪ್ಪ ಮೂಲ್ಯ, ಕುರ್ನಾಡು ದತ್ತಾತ್ರೇಯ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಗಣೇಶ್ ನಾಯಕ್ ಕುರ್ನಾಡುಗುತ್ತು, ಸಜೀಪಮುನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ
ಪರಮೇಶ್ವರ ಮೂಲ್ಯ, ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಕಾರ್ಯದರ್ಶಿ ಮೋಹನದಾಸ್ ಗಾಂಭಿರ್ ಬೋಳಿಯಾರ್ ಗುತ್ತು,
ಉಳ್ಲಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಭಾಸ್ಕರ ಕುತ್ತಾರ್,
ಗುರುದೇವಾ ಸೇವಾ ಬಳಗ ಅಧ್ಯಕ್ಷ ನೇಮಿರಾಜ್ ಶೆಟ್ಟಿ,
ಅಮ್ಮೆಂಬಳ ಕುಲಾಲ ಜಾತಿ ಅಭ್ಯುದಯ ಸಂಘದ ಅಧ್ಯಕ್ಷ ನಾಗಪ್ಪ ಕುಲಾಲ್ ಉದ್ದ, ದ.ಕ.ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಸೆಲ್ಕೋ ಸೀನಿಯರ್ ಮ್ಯಾನೇಜರ್ ರವೀಣ ಬಂಗೇರ, ಸ್ಕಾಡ್ಸ್ ಅಧ್ಯಕ್ಷ
ರವೀಂದ್ರ ಕಂಬಳಿ,ಪ್ರಗತಿಪರ ಕೃಷಿಕ ಚಿನ್ನಯ್ಯ ಸಾಲ್ಯಾನ್
ಉಪಾಧ್ಯಕ್ಷ ಜನಾರ್ದನ ಬೊಂಡಾಲ ವೇದಿಕೆಯಲ್ಲಿದ್ದರು.
ನಿರ್ದೇಶಕರಾದ ರಮೇಶ್ ಸಾಲ್ಯಾನ್, ಸತೀಶ್, ಬಿ. ರಮೇಶ್ ಸಾಲ್ಯಾನ್, ಸುರೇಶ್ ಕುಲಾಲ ಎನ್., ಭೋಜ ಸಾಲಿಯಾನ್, ಹರೀಶ್, ಪ್ರೇಮನಾಥ ಬಂಟ್ವಾಳ್, ವಿದ್ಯಾ, ಮಾಲತಿ ಮಚೇಂದ್ರ, ಜಗನ್ನಿವಾಸ ಗೌಡ, ಗಣೇಶ್ ಸಮಗಾರ, ರೇಖಾ ನಾಯಕ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಅರುಣ್ ಕುಮಾರ್ ಕೆ. ಸ್ವಾಗತಿಸಿದರು, ಕಿರಣ್ ಕುಮಾರ್ ಎ. ವಂದಿಸಿದರು. ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.


Advertisement







