
ಬಂಟ್ವಾಳ: ಮೊಡಂಕಾಪು ಬಳಿ ರೈಲ್ವೇ ಓವರ್ ಬ್ರಿಡ್ಜ್ ಬಳಿ ಹಾಕಲಾದ ಕಬ್ಬಿಣ ಬೀಮ್ ಗೆ ಲಾರಿ ಡಿಕ್ಕಿಯಾಗಿ ಅದು ಸ್ಕೂಟರ್ ಸವಾರನ ಮೇಲೆ ಬಿದ್ದು ಆತ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆಯ ವೇಳೆ ನಡೆದಿದೆ.

ವಾಹನ ಸಾಗಾಟದ ಕಂಟೈನರ್ ಲಾರಿ ರೈಲ್ವೇ ಮೇಲ್ಸೆತುವೆಯ ತಡೆಬೇಲಿಗೆ ಡಿಕ್ಕಿಯಾಗಿದೆ. ಈ ಸಂದರ್ಭ ಕಬ್ಬಿಣದ ಬೀಮ್ ಸೇತುವೆಯ ಅಡಿಯಲ್ಲಿ ಸಂಚರಿಸುತ್ತಿದ್ದ ಪಚ್ಚಿನಡ್ಕ ಬಳಿಕ ನೂರ್ನಡ್ಕ ನಿವಾಸಿಯ ಮೇಲೆ ಬಿದ್ದು ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೀಮ್ ಬಿದ್ದು ಸ್ಕೂಟರ್ ಜಖಂಗೊಂಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


Advertisement







