
ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಮೋಹನ್ ಆಯ್ಕೆಯಾಗಿದ್ದಾರೆ.
ತ್ರೈವಾರ್ಷಿಕ ಮಹಾಸಭೆಯು ಶ್ರೀ ರಕ್ತೇಶ್ವರಿದೇವಿ ಸನ್ನಿಧಿ ವಠಾರದಲ್ಲಿ ಬ.ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷದಅವಧಿಗೆ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸೇವಾ ಸಮಿತಿ ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಶಿವಶಂಕರ್, ಕೋಶಾಧಿಕಾರಿಯಾಗಿ ರಾಜೇಶ್.ಎಲ್.ನಾಯಕ್, ಜತೆ ಕಾರ್ಯದರ್ಶಿಯಾಗಿ ಸತೀಶ್ಕುಮಾರ್ ಆಯ್ಕೆಯಾಗಿದ್ದಾರೆ. ಇತರಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.


Advertisement







