
ಬಂಟ್ವಾಳ: ಎಲ್ಲರಿಗೂ ರಕ್ತದಾನ ಮಾಡಲು ಸಾಧ್ಯವಿಲ್ಲ. ಸಾಧ್ಯವಿರುವ ಎಲ್ಲರೂ ರಕ್ತದಾನ ಮಾಡಬೇಕು, ನಾವು ರಕ್ತದಾನ ಮಾಡುವುದರ ಜೊತೆಗೆ ಸಮಾಜಕ್ಕೂ ರಕ್ತದಾನ ಮಾಡಲು ಪ್ರೇರಣೆ ನೀಡಬೇಕು ಎಂದು ಬಿ.ಸಿ.ರೋಡಿನ ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಸಂಸ್ಥಾಪಕ ಪ್ರಶಾಂತ್ ಫ್ರಾಂಕ್ ಹೇಳಿದರು.

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಹಾಗೂ ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ಆಶ್ರಯದಲ್ಲಿ ಜ. ಕೆ. ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ನಡೆದ 137ನೇ ರಕ್ತದದೇವದಾಸ್ ರದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ಅಧ್ಯಕ್ಷ ರಾಜೇಂದ್ರ ಕೆ. ರಕ್ತದಾನ ಮಾಡಿ ಶಿಬಿರ ಉದ್ಘಾಟಿಸಿ ಮಾತನಾಡಿ
ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಜನರು ದಾನ ಮಾಡಿದರೆ ಮಾತ್ರ ಪಡೆಯಲು ಸಾಧ್ಯವಿದೆ. ಆದ್ದರಿಂದ ಹೆಚ್ಚು ಜನರು ರಕ್ತದಾನ ಮಾಡಬೇಕು ಎಂದರು.

ಸತ್ಯಾಸಾಯಿ ರಕ್ತನಿಧಿಯ ಮೋಹನ್ ಶೆಟ್ಟಿ ಮಾತನಾಡಿ ರಕ್ತದಾನ ಶಿಬಿರ ಆಯೋಜಿಸುವುದು ಸುಲಭದ ಕೆಲಸವಲ್ಲ. ಕೃಷ್ಣ ಕುಮಾರ್ ಪೂಂಜ ಅವರು 137ನೇ ರಕ್ತದಾನ ಶಿಬಿರ ಆಯೋಜಿರುವುದು ಶ್ರೇಷ್ಠ ಕಾರ್ಯ ಎಂದರು.
ಕೆ.ಎಸ್ ಹೆಗ್ಡೆ ಬ್ಲಡ್ ಬ್ಯಾಂಕ್ ನ ಅನಿಲ್ ಶೆಟ್ಟಿ ಮಾತನಾಡಿ ರಕ್ತದಾನ ಮಾಡಿದ ದಿನ ಜೀವನ ಅರ್ಥಪೂರ್ಣ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ಕಾರ್ಯದರ್ಶಿ ರವಿ ಕಲ್ಪನೆ, ಮಾಜಿ ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಪದ್ಮನಾಭ ಕಿದೆಬೆಟ್ಟು, ಅರ್ಜುನ್ ಪೂಂಜ
ಕವಿತಾ ದೇವದಾಸ್ ಅರ್ಕುಳ , ಸಾರಮ್ಮಅಬೂಬಕ್ಕರ್
ಪ್ರಶಾಂತ್ ತುಂಬೆ, ನಾರಯಣ ಬಡ್ಡೂರು, ಶಿವರಾಜ ಸುಜೀರು, ಶೇಖರ ಕಲ್ಲತಡಮೆ, ಸುರೇಶ್ ರಪೆಲಪಾಡಿ
ಪ್ರಮೋದ್ ದೇವಾಡಿಗ, ವಿಠಲ ಆಳ್ವ, ಶ್ರೀಪ್ರಕಾಶ್ ಜೈನ್ ಪಂಜಿಕಲ್ಲು, ಸುದೇಶ್ ಮೇರಮಜಲು, ದಿನೇಶ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 72 ಯುನಿಟ್ ರಕ್ತ ಸಂಗ್ತಹವಾಯಿತು.
ಬಿಟಿಡಬ್ಲ್ಯು_ಜು19_3
ಚಿತ್ರ: ಸೇವಾಂಜಲಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ
ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ಅಧ್ಯಕ್ಷ ರಾಜೇಂದ್ರ ಕೆ. ರಕ್ತದಾನ ಮಾಡಿದರು.


Advertisement







