

ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ಪಲ್ಲಮಜಲುವಿನಲ್ಲಿ ನಿರ್ಮಾಣಗೊಂಡ ಕಮಲಜ್ಜಿಯ ಕುಟೀರವನ್ನು ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜಿ. ಸೂರ್ಯನಾರಾಯಣ ವರ್ಮ ಉದ್ಘಾಟಿಸಿ ಕಮಲಜ್ಜಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಜೆಸಿಐ ಬಂಟ್ವಾಳದ ಸದಸ್ಯರು ಅಗತ್ಯ ಹಾಗೂ ಅರ್ಥಪೂರ್ಣ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಸಮಾಜದ ದುರ್ಬಲರಿಗೆ, ಅಶಕ್ತರಿಗೆ ಉಪಯೋಗವಾಗುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶ್ರೇಷ್ಠವಾದ. ಕಾರ್ಯ ಅದನ್ನು ಜೆಸಿಐ ಬಂಟ್ವಾಳ ಮಾಡಿದೆ. ಈ ಯೋಜನೆ ತುಂಬಾ ಇಷ್ಟವಾಗಿದ್ದು ಇಂತಹ ಸೇವಾ ಕಾರ್ಯವನ್ನು ಮುಂದುವರೆಸಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಮಾತನಾಡಿ ಜೆಸಿಐ ಬಂಟ್ವಾಳದ ಶಾಶ್ವತ ಯೋಜನೆ ವೃದ್ದ ಮಹಿಳೆಗೆ ಆಸರೆಯಾಗಿದೆ. ಇದೊಂದು ಅತ್ಯುತ್ತಮ ಕಾರ್ಯ ಎಂದು ತಿಳಿಸಿದರು.
ಕಾರ್ಮೆಲ್ ಪದವಿ ಕಾಲೇಜಿನ ಪ್ರಾಂಶುಪಾಲೆ ವಂ.ಭ.ಡಾ. ಲತಾ ಫೆರ್ನಾಂಡೀಸ್ ಅನಿಸಿಕೆ ವ್ಯಕ್ತಪಡಿಸಿ ಯುವ ಸಮುದಾಯಕ್ಕೆ ಪ್ರೇರಣೆ ನೀಡುವಂತಹ ಕೆಲಸವನ್ನು ಜೆಸಿಐ ಬಂಟ್ವಾಳ ಮಾಡಿದೆ. ಬಡವರ, ಹಿರಿಯ ಜೀವಗಳ ಕಣ್ಣೊರೆಸುವ ಕಾರ್ಯವನ್ನು ಮುಂದುವರೆಸಿ ಎಂದು ಆಶಿಸಿದರು.


ಜೆಸಿಐ ಬಂಟ್ವಾಳದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಕಮಲಜ್ಜಿ ಕುಟೀರ ನಿರ್ಮಾಣದ ರುವಾರಿ ಸದಾನಂದ ಬಂಗೇರ ಅವರನ್ನು ಗೌರವಿಸಲಾಯಿತು.
ವಲಯ ಉಪಾಧ್ಯಕ್ಷ ರಂಜಿತ್ ಎಚ್.ಡಿ, ವಲಯ ಕಾರ್ಯದರ್ಶಿ ರವಿಚಂದ್ರ ಪಾಟಾಳಿ ಸಹಿತ ವಲಯಾಧಿಕಾರಿಗಳು, ಜೆಸಿಐ ಬಂಟ್ವಾಳದ ಸದಸ್ಯರು, ಕಾರ್ಮೆಲ್ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಧ್ಯಕ್ಷ ಗಣೇಶ್ ಕುಲಾಲ್ ಸ್ವಾಗತಿಸಿ, ಕಾರ್ಯದರ್ಶಿ ಕಿಶೋರ್ ಆಚಾರ್ಯ ವಂದಿಸಿದರು.
