
ಬಂಟ್ವಾಳ: ಕುಕ್ಕಿಪಾಡಿ ಗ್ರಾಮದ ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯೀ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳು ಎಪ್ರಿಲ್ 26 ರಿಂದ ಮೇ 2 ರ ತನಕ ಜರುಗಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು ತಿಳಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು .
ಎ.26 ರಂದು ಆದಿತ್ಯವಾರ 3 ಗಂಟೆಗೆ ಸಿದ್ದಕಟ್ಟೆ ನಲ್ಲೂರಂಗಡಿ ಬಸದಿಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಸಂಗಬೆಟ್ಟು ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕ ಪ್ರಭಾಕರ ಐಗಳ್ ಮತ್ತು ಸಿದ್ದಕಟ್ಟೆಯ ವೈದ್ಯ ಡಾI ಪ್ರಭಾಚಂದ್ರ ಜೈನ್ ಚಾಲನೆ ನೀಡಲಿದ್ದಾರೆ. ಗಣ್ಯರಾದ ಕಿರಣ್ ಕುಮಾರ್ ಮಂಜಿಲ,ಜಗತ್ಪಾಲ ಶೆಟ್ಟಿ ಉಮನೊಟ್ಟು , ಮಹಾವೀರ ಜೈನ್, ನಿತ್ಯಾನಂದ ಪೂಜಾರಿ ಕೆಂತಲೆ, ಸಂತೋಷ್ ಕುಮಾರ್ ರಾಯಿಬೆಟ್ಟು , ಪ್ರಭಾಕರ ಆಚಾರ್ಯ ,ಸದಾನಂದ ಕುಲಾಲ್ , ಮುಂತಾದವರು ಭಾಗವಹಿಸುವರು . ಸಂಜೆ ಗಂಟೆ 6 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ . ಎ.27 ಮತ್ತು 28 ರಂದು ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ ಎಂದರು.


ಎ.29ರಂದು ಬೆಳಿಗ್ಗೆ ಗಂಟೆ 10.27 ಕ್ಕೆ ಮಿಥುನ ಲಗ್ನದಲ್ಲಿ ಪಂಚಲೋಹದ ಶ್ರೀ ದೇವಿಯ ಬಿಂಬ ಪ್ರತಿಷ್ಠೆ, ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜ ರವರಿಂದ ಆರ್ಶೀವಚನ, ಸಂಜೆ ಗಂಟೆ 6 ರಿಂದ ಯಕ್ಷ ಕದಂಬ ಯಕ್ಷಗಾನ ಬಳಗ ಮಾವಿನಕಟ್ಟೆ ಇವರಿಂದ ಯಜ್ಞ ಸಂರಕ್ಷಣಾ ಸೀತಾಕಲ್ಯಾಣ, ರಾತ್ರಿ ಗಂಟೆ 8 ರಿಂದ ಡ್ಯಾನ್ಸಿಂಗ್ ಸ್ಟಾರ್ ಎಡಪದವು ಇವರಿಂದ “ಗಾನ ನೃತ್ಯ ವೈಭವ ಜರುಗಲಿದೆ .
ಎ.30 ರಂದು ಗುರುವಾರ 4.30ರಿಂದ ತತ್ವಮಸಿ ಶ್ರೀ ಅಯ್ಯಪ್ಪ ಭಜಕ ವೃಂದ ಪೊಳಲಿ ಇವರ ನೇತೃತ್ವದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಗಮೋತ್ಸವಕ್ಕೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಬೆಳಾಲು ಇಲ್ಲಿನ ಧರ್ಮದರ್ಶಿ ಹರೀಶ್ ಅರಿಕೋಡಿ ಚಾಲನೆ ನೀಡಲಿದ್ದಾರೆ . ಸಂಜೆ ಗಂಟೆ 6 ರಿಂದ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು , ಶ್ರೀ ಕ್ಷೇತ್ರ ಪೂಂಜಾ ದೇವಸ್ಥಾನದ ಆಸ್ರಣ್ಣರಾದ ಕೃಷ್ಣಪ್ರಸಾದ್ ಆಸ್ರಣ್ಣ ಅಧ್ಯಕ್ಷತೆ ವಹಿಸಲಿರುವರು . ರಾತ್ರಿ 8 ರಿಂದ ಹಾಸ್ಯಮಯ ನಾಟಕ ಜರುಗಲಿದೆ ಎಂದು ತಿಳಿಸಿದರು.
ಮೇ.1 ಶುಕ್ರವಾರ ಬೆಳಿಗ್ಗೆ 10.45 ಕ್ಕೆ ಬ್ರಹ್ಮ ಕಲಶಾಭಿಷೇಕ ನೇರವೆರಲಿದೆ , ಬೆಳಿಗ್ಗೆ ಗಂಟೆ 11.30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು , ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾI ಪ್ರಭಾಕರ ಭಟ್ ಕಲ್ಲಡ್ಕ ದೀಪ ಪ್ರಜ್ವಲನೆ ಮಾಡಲಿದ್ದು , ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿಯವರು ಹಾಗೂ ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣರು ಆರ್ಶೀವಚನ ನೀಡಲಿದ್ದಾರೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ,ಉಳಿಪಾಡಿ ಅಧ್ಯಕ್ಷತೆ ವಹಿಸಲಿರುವರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಂಸದರಾದ ಕ್ಯಾ. ಬ್ರಿಜೇಶ್ ಚೌಟ , ಕೋಟ ಶ್ರೀ ನಿವಾಸ ಪೂಜಾರಿ , ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ , ಮಾಜಿ ಸಚಿವರಾದ ರಮಾನಾಥ ರೈ , ಬಿ. ನಾಗರಾಜ್ ಶೆಟ್ಟಿ, ಮತ್ತಿತರ ಗಣ್ಯರು ಭಾಗವಹಿಸುವರು. ಸಂಜೆ 5ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆಯಕ್ಷಗಾನ ನಡೆಯಲಿದೆ . ಮೇ 2 ಶನಿವಾರ ಸಂಜೆ ಗಂಟೆ 4 ರಿಂದ ಕಲ್ಲುರ್ಟಿ ಪಂಜುರ್ಲಿ ದೈವಗಳಿಗೆ ನೇಮೋತ್ಸವ “ ಜರುಗಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಪ್ರಭಾಕರ ಪ್ರಭು ,ದುರ್ಗಾದಾಸ್ ಶೆಟ್ಟಿ ಕರೆಂಕಿಜೆ , ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರಾದ ಗಂಗಾಧರ ಗೌಡ ಕುಕ್ಕೇಡಿ ,ಗುರಿಕಾರರಾದ ಗೋಪಾಲ ಗೌಡ , ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹೇಮಚಂದ್ರ ಗೌಡ ಸಿದ್ದಕಟ್ಟೆ ,ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಉಮೇಶ್ ಗೌಡ ಮಂಚಕಲ್ಲು ಉಪಸ್ಥಿತರಿದ್ದರು.
Advertisement







