
ಬಂಟ್ವಾಳ: ಹಳದಿ ಬಣ್ಣದ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಜನಾಕರ್ಷಣೆ ಪಡೆದುಕೊಂಡಿದೆ. ಹಸಿರು ಬಣ್ಣದ ತೈವಾನ್ ಕಲ್ಲಂಗಡಿಗಳ ಮಧ್ಯೆ ಹಳದಿ ಬಣ್ಣದ ಕಲ್ಲಂಗಡಿ ಗ್ರಾಹಕರ ಗಮನ ಸೆಳೆಯುತ್ತಿದೆ. ಹಸಿರು ಕಲ್ಲಂಗಡಿ ಕೆಜಿಗೆ ೨೦ ರೂ.ಗೆ ಮಾರಾಟವಾಗುತಿದ್ದರೆ ಹಳದಿ ಕಲ್ಲಂಗಡಿಗೆ ಕೆಜಿಗೆ ೩೦ ರೂಪಾಯಿ ಇದೆ. ಬಣ್ಣದ ಆಕರ್ಷಣೆಯಿಂದ ಜನರು ಎರಡೂ ಬಣ್ಣದ ಕಲ್ಲಂಗಡಿಯನ್ನು ಮನೆಗೆ ಒಯ್ಯುತ್ತಿದ್ದಾರೆ.
—
