
ಬಂಟ್ವಾಳ: ಪುರತನ ದೈವ ಕ್ಷೇತ್ರವಾಗಿರುವ ಸಜೀಪಮಾಗಣೆಯ ಮಿತ್ತಮಜಲು ಕ್ಷೇತ್ರ ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದ್ದು 3 ಗೋಪುರಗಳ ಪುನರ್ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದು ಸಜೀಪಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ಭಾನುವಾರ ಮಾರ್ನಬೈಲು ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆದ ಸಜೀಪ ಮಾಗಣೆಯ ಮಿತ್ತಮಜಲು ಶ್ರೀ ನಡಿಯೇಲು ದೈಯ್ಯಂಗುಲು, ಶ್ರೀ ಉಳ್ಳಾಲ್ತಿ ಹಾಗೂ ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರದ ನವೀಕೃತ ಗೋಪುರಗಳ ಲೋಕಾರ್ಪಣೆ, ಸಾನಿಧ್ಯ ಕಲಶಾಧಿ ಕಾರ್ಯಕ್ರಮಗಳ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಎ. 2 ಮತ್ತು 3 ರಂದು ಈ ಕಾರ್ಯಕ್ರಮಗಳು ನಡೆಯಲಿದ್ದು ಹೊರೆಕಾಣಿಕೆ, ಅನ್ನದಾನ ಸ್ವಚ್ಚತೆಯ ಕಾರ್ಯದಲ್ಲಿ ಗ್ರಾಮಸ್ಥರೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು. ಇದೇ ಸಂದರ್ಭ ಅವರು ಅಯ್ಯಪ್ಪ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಸಂಕಲ್ಪದ ಸಾಕಾರಕ್ಕಾಗಿ ಶ್ರೀ ದೇವರಿಗೆ ೧೮ ಗುರುವಾರಗಳ ಪರ್ಯಂತ ನಡೆಯಲಿರುವ ಪಂಚಾರತಿ ಸೇವೆಯ ಆಮಂತ್ರಣ ಬಿಡುಗಡೆಗೊಳಿಸಿದರು.

ಹೊರೆಕಾಣಿಕೆ ಸಮರ್ಪಣೆ ಮುಖ್ಯ ಸಂಚಾಲಕ ಜಯಶಂಕರ ಬಾಸ್ರಿತ್ತಾಯ ಮಾತನಾಡಿ ಹೊರೆಕಾಣಿಕೆಗೆ ಗ್ರಾಮಸ್ಥರು ತಮ್ಮ ಶಕ್ತಿಯಾನುಸಾರ ಹಸಿರುವಾಣಿ, ಸುವಸ್ತುಗಳನ್ನು ಸಮರ್ಪಿಸುವಂತೆ ಮನವಿ ಮಾಡಿದರು. ಜೊತೆ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಗಳು ಹಾಗೂ ಹೊರೆಕಾಣಿಕೆಯಲ್ಲಿ ಭಾಗವಹಿಸುವಂತೆ ವಿನಂತಿಸಿ ಕೊಂಡರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಕಾಂತ ಶೆಟ್ಟಿ ಸಂಕೇಶ, ಜೊತೆ ಕಾರ್ಯದರ್ಶಿ ರತ್ನಾಕರ ಪೂಜಾರಿ ನಡಾರ್, ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಗೌರವಾಧ್ಯಕ್ಷರಾದ
ಸಂಜೀವ ಗುರುಸ್ವಾಮಿ, ಕೃಷ್ಣ ಗುರು ಸ್ವಾಮಿ, ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್
ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಾಮೋದರ ಬಿ.ಎಂ. ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ ವಂದಿಸಿದರು. ಕೇಶವ ಮಾಸ್ತರ್ ಮಾರ್ನಬೈಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಯಶವಂತ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
