

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ok ದುರ್ಗಾಂಬ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಬ್ರಹ್ಮಶ್ರೀ ವೇದಮೂರ್ತಿ ನಿಲೇಶ್ವರ ಕೆ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಫೆ. 12ರಿಂದ ಆರಂಭಗೊಂಡು ಫೆ.17ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ.12ರಂದು ಧ್ವಜಾರೋಹಣ, ರಾತ್ರಿ 7ಕ್ಕೆ ಸಜೀಪನಡುಶ್ರೀ ನಾಲ್ಕೈತ್ತಾಯ ದೈವಸ್ಥಾನದಿಂದ ಭಂಡಾರ ಹೊರಟು, ರಾತ್ರಿ 8.30ಕ್ಕೆ ಕ್ಷೇತ್ರ ತಲುಪಲಿದೆ. ರಾತ್ರಿ 10 ರಿಂದ ದೇವರ ಬಲಿ, ಉತ್ಸವ ನಡೆಯಲಿದೆ.
ಫೆ. 13ರಂದು ಬಯನ ಬಲಿ ಉತ್ಸವ. ಫೆ. 14ರಂದು ನಡು ಬಲಿ ಮತ್ತು ಪಾಲಕಿ ಉತ್ಸವ, ಫೆ. 15ರಂದು ಲಲಿತಾ ಸಹಸ್ರನಾಮ ಯಾಗ, ಮಹಾರಥೋತ್ಸವ, ಫೆ.16ರಂದು ಧ್ವಜಾವರೋಹಣ, ಶ್ರೀ ನಾಲ್ಕೈತ್ತಾಯ ದೈವದ ನೇಮ, ಫೆ. 17ರಂದು ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆ ನಡೆಯಲಿದೆ.
Advertisement







