
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲಿರುವ ಶ್ರೀ ಚಂಡಿಕಾ ಪರಮೆಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಫೆ.12 ರಿಂದ ಫೆ.14ರವೆರೆಗೆ ನಡೆಯಲಿದೆ.
ಫೆ.12ರಂದು ಬೆಳಿಗ್ಗೆ 7ಕ್ಕೆ ಪ್ರಾರ್ಥನೆ ಬಳಿಕ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ ನಡೆಯಲಿದೆ. ಸಂಜೆ 4.30ರಿಂದ ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಫೆ.13ರಂದು ಬೆಳಿಗ್ಗೆ 8.30ಕ್ಕೆ ಗಣಹೋಮ, 9ರಿಂದ 12ರವರೆಗೆ ಬಿಂಬ ಕಲಶ ಪೂಜೆ, ಬಿಂಬ ಕಲಶಾಭಿಷೇಕ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ದೀಪಾಲಂಕರ ಪೂಜೆ, ವಾದ್ಯ ಸೇವೆ, ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿದೆ. 8.30ಕ್ಕೆ ಬಲಿ ಹೊರಟು, 10ಕ್ಕೆ ವಸಂತಕಟ್ಟೆ ಪೂಜೆ ನಡೆಯಲಿದೆ. 10.30ಕ್ಕೆ ವಿಶೇಷ ನರ್ತನ ಬಲಿ ನಡೆಯಲಿದೆ.
ಫೆ.14ರಂದು ಬೆಳಿಗ್ಗೆ ಗಣಹೋಮ. 8ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ. 11ಕ್ಕೆ ನವಕ ಕಲಶಾಭಿಷೇಕ, 12.30ಕ್ಕೆ ಮಹಾಪೂಜೆ, 1ಕ್ಕೆ ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಹರಕೆ ಬಂದ ಸೀರೆಗಳ ಏಲಂ ನಡೆದು ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 8ಕ್ಕೆ ವಿಶೇಷ ರಂಗ ಪೂಜೆ ನಡೆಯಲಿದೆ.
Advertisement







