
ಬಂಟ್ವಾಳ: ತಾಲೂಕು ಮರಾಟಿ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ಶ್ರೀ ಮಹಮ್ಮಯಿ ದೇವಿ ಅಮ್ಮನವರ ಸಾಮೂಹಿಕ ಗೋಂದೊಲು ಪೂಜೆ, ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಜ.10ರಂದು ಶುಕ್ರವಾರ ಕಲ್ಲಡ್ಕ ಪೂರ್ಲಿಪಾಡಿಯಲ್ಲಿರುವ ಮರಾಟಿ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 8.30ರಿಂದ ದೇವತಾ ಪ್ರಾರ್ಥನೆ, ಮಧ್ಯಾಹ್ನ 12 ಕ್ಕೆ ಪೂಜಾ ಸಿದ್ಧತೆ, ಮಧ್ಯಾಹ್ನ 1ಕ್ಕೆ ಅನ್ನಪ್ರಸಾದ, ಸಂಜೆ 4 ಗಂಟೆಗೆ ಭೈರವ ಆರಾಧನೆ ನಡೆದು ೬ ಗಂಟೆಗೆ ಶ್ರೀ ಮಹ್ಮಮಾಯಿ ದೇವಿ ಅಮ್ಮನವರ ಸಾಮೂಹಿಕ ಗೋಂದೊಲು ಪೂಜೆ ಆರಂಭಗೊಳ್ಳಲಿದೆ. ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ. ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಪೆರ್ನೆ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಕಾರ್ಪೋರೆಟ್ ಅಫೇರ್ಸ್ ಮಿನಿಸ್ಟ್ರಿ ನಿವೃತ್ತ ಪ್ರಾದೇಶಿಕ ನಿರ್ದೆಶಕ ಬಿ.ಎನ್. ಹರೀಶ್, ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿ, ಲೋಕೋ ಪೈಲಟ್ ವನಿತಾ ಭಾಗವಹಿಸುವರು. ಸಂಜೆ 9 ರಿಂದ ಭಜನಾ ಸಂಕೀರ್ತನೆ ನಡೆಯಲಿದೆ, ರಾತ್ರಿ 12.30ಕ್ಕೆ ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
