
ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ವಾರ್ಷಿಕೋತ್ಸವ ಡಿ.26ರಂದು ಶುಕ್ರವಾರ ನಡೆಯಲಿದೆ.
ಅಂದು ಬೆಳಿಗ್ಗೆ 5ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆದು ಗಣಹೋಮ, ಬಳಿಕ ಸೂರ್ಯೋದಯದಿಂದ ಸೂರ್ಯೋಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಬೆಳಿಗ್ಗೆ 10 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 11ರಿಂದ ನಾಗದೇವರಿಗೆ ನಾಗತಂಬಿಲ, ಆಶೇಷಬಲಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಶ್ರೀ ಓಂಕಾರೇಶ್ವರಿ ದೇವಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಭಜನಾ ಸಂಕೀರ್ತನೆಯ ಭಜನಾ ಮಂಗಳ, 7.30ರಿಂದ 8.30ರವರೆಗೆ ಭಜನೆ ನಡೆದು ರಾತ್ರಿ 8.30ಕ್ಕೆ ಓಂಕಾರೇಶ್ವರಿ ದೇವಿಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.30ಕ್ಕೆ ಭಗವತಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಸೋಣ ಸಂಕ್ರಾಂತಿ ಎಂಬ ಪ್ರಸಂಗ ಬಯಲಾಟ ನಡೆಯಲಿದೆ.


Advertisement







