
ಬಂಟ್ವಾಳ: ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ ಇದರ ಬಂಟ್ವಾಳ ಘಟಕದ 8ನೇ ವಾರ್ಷಿಕ ಮಹಸಭೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ ಮಾತನಾಡಿ ಸಂಘ ಗಟ್ಟಿಯಾಗಬೇಕು, ಸಂಘಟನೆಯ ಜೊತೆ ಇದ್ದುಕೊಂಡು ಉದ್ಯಮ ಮಾಡಿದಾಗ ಸಂಘಟನೆಯೊಂದಿಗೆ ನಮಗೂ ಬಲ ಬರುತ್ತದೆ . ಸಂಘದ ಪ್ರತಿಯೊಬ್ಬ ಸದಸ್ಯರು ಸಂಘದ ಅಭಿವೃದ್ಧಿಗಾಗಿ ಸಹಕರಿಸುವಂತೆ ತಿಳಿಸಿದರು.


ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಕ್ತದಾನ ಶಿಬಿರದಲ್ಲಿ ಸಂಘದ ಸದಸ್ಯರು ಸೇರಿದಂತೆ ಮಹಿಳೆಯರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಶಾಮಿಯಾನ ಮಾಲಕರ ಸಂಘವೂ ಸದೃಡವಾಗಿದ್ದು ಜಿಲ್ಲಾಧ್ಯಕ್ಷರ ಕಾರ್ಯ ವೈಖರಿ ತೃಪ್ತಿ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಶಾಮಿಯಾನ ಮಾಲಕರಾದ ಅಬ್ದುಲ್ ಕರೀಂ, ಸುರೇಶ್ ಪೂಜಾರಿ, ತಿಮ್ಮಪ್ಪ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹೊಸ ಸದಸ್ಯರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಯಿತು.
ಜಿಲ್ಲಾ ಕಾರ್ಯದರ್ಶಿ ಪಿಯೂಸ್ ಮ್ಯಾಕ್ಸಿಂ ಸಿಕ್ವೇರಾ, ಜಿಲ್ಲಾ ಕೋಶಾಧಿಕಾರಿ ನಿಶಿತ್ ಪೂಜಾರಿ, ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್
ಉಪಸ್ಥಿತರಿದ್ದರು.



ಬಂಟ್ವಾಳ ಘಟಕದ ಕಾರ್ಯದರ್ಶಿ ಸುಧೀರ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮೈಕಲ್ ಡಿಕೋಸ್ತಾ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ಸುಭಾಶ್ಚಂದ್ರ ಜೈನ್ವ್ ಸ್ವಾಗತಿಸಿದರು. ಸದಸ್ಯ ಐವನ್ ಡಿಸೋಜಾ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಮಹಾಸಭೆಯ ಪೂರ್ವಭಾವಿಯಾಗಿ ಲಯನ್ಸ್ ಕ್ಲಬ್ ಬಂಟ್ವಾಳದ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು. 50 ಯುನಿಟ್ ರಕ್ತ ಸಂಗ್ರಹವಾಯಿತು. ಸಭಾವೇದಿಕೆ, ಊಟೋಪಚಾರದ ವ್ಯವಸ್ಥೆ ಪ್ಲಾಸ್ಟಿಕ್ ರಹಿತವಾಗಿ ಗಮನ ಸೆಳೆಯಿತು
Advertisement







