
ಬಂಟ್ವಾಳ: ತರವಾಡು ಮನೆಗಳಲ್ಲಿ ಕುಟುಂಬಿಕರ ಜೊತೆ ವೈವಿಧ್ಯಮಯ ಮನರಂಜನೆಯ ಆಟಗಳು ನಡೆಯುವುದರಿಂದ ಯುವಕ ಯುವತಿಯರು ಮತ್ತು ಮಕ್ಕಳಲ್ಲಿ ತರವಾಡು ಮನೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ ಎಂದು ತಾರಾನಾಥ ಬಿ.ಸಿ.ರೋಡು ಹೇಳಿದರು.

ಕುಲಾಲ್ ಬಂಗೇರಾ ಕುಟುಂಬದ ತರವಾಡು ಮನೆ ಬೊಳ್ಮಾ ಇಲ್ಲಿ ನಡೆದ ಕುಟುಂಬಿಕರ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಕುಟುಂಬದ ಗುರಿಕಾರ ಹರೀಶ್ ಕೊಡ್ಡೆ ಉದ್ಘಾಟಿಸಿದರು. ಕುಟುಂಬದ ಹಿರಿಯರಾದ ರಾಘವ್ ವಿಟ್ಲ, ಪದ್ಮನಾಭ ಉರ್ವ, ಸೋಮನಾಥ ಓರ್ಕಡಿ, ದೇಜಪ್ಪ ಬಸ್ರಾ,ಉಪಸ್ಥಿತರಿದ್ದರು ಉಪಾಧ್ಯಕ್ಷರಾದ ನವೀನ್ ಸ್ವಾಗತಿಸಿ ಅಕ್ಷಯ್ ವಂದಿಸಿ ಕಾರ್ಯದರ್ಶಿ ರವೀನಾ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು.


Advertisement







