
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ 2025-26ನೇ ಸಾಲಿನ ಶಾಶ್ವತ ಯೋಜನೆಯಾಗಿ ಬಿ.ಸಿ.ರೋಡಿನ ಸೋಮಾಯಜಿ ಹೌಸ್ ಕಟ್ಟಡದ ಬಳಿ ನಿರ್ಮಾಣಗೊಂಡ ಲಯನ್ಸ್ ಆಶ್ರಯ ಪ್ರಯಾಣಿಕರ ತಂಗುದಾಣವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಭಾನುವಾರ ಉದ್ಘಾಟಿಸಿದರು.

ಅವರು ಮಾತನಾಡಿ ಈ ಭಾಗದ ಜನರ ಬೇಡಿಕೆಯ ಅನುಗುಣವಾಗಿ ಇಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಗೊಂಡಿದೆ. ನಾಗರಿಕ ಸೇವಾ ಸಮಿತಿಯ ಮನವಿಯಂತೆ ಕೆಎಸ್ಆರ್ಸಿಯ ಮೂಲಕ ಇಲ್ಲಿ ಬಸ್ಸು ನಿಲುಗಡೆಗೆ ಅವಕಾಶ ದೊರಕಿಸಿಕೊಟ್ಟಿದ್ದು ಇದೀಗ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಇಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಬಸ್ಸು ನಿಲುಗಡೆಗೆ ಅನುಕೂಲವಾಗುವಂತೆ ಡಾಮಾರೀಕರಣ ಹಾಗೂ ಹೈಮಾಸ್ಕ್ ದೀಪದ ಅಳವಡಿಕೆಯನ್ನು ಸಂಬಂಧಪಟ್ಟವರು ಮಾಡಲಿದ್ದಾರೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗ ವಿದ್ಯುತ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪುರಸಭಾಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್, ಲೋಲಾಕ್ಷ ಶೆಟ್ಟಿ, ನಾಮನಿರ್ದೇಶಿತ ಸದಸ್ಯ ಜಗದೀಶ್ ಕುಂದರ್, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಇಸ್ಮಾಯಿಲ್, ಲಯನ್ಸ್ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ರೋಹಿತಾಶ್ವ ಬಂಗ, ಮಾಜಿ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಸಹಕರಿಸಿದ ನಾಗರಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಅಧ್ಯಕ್ಷ ದಿನೇಶ್ ಸಂಚಾಲಕ ಶ್ರೀಧರ ಅಮೀನ್, ಕಾರ್ಯಧ್ಯಕ್ಷ ಹರೀಶ್ ಅಂಚನ್, ಗುತ್ತಿಗೆದಾರ ಯತೀಶ್ ಕರ್ಕೆರ, ಸುನೀಲ್ ಬಿ. ರಾಜೇಶ್ ಸುವರ್ಣ, ಸುಧಾಕರ ಆಚಾರ್ಯ ಅವರನ್ನು ಗೌರವಿಸಲಾಯಿತು.


ಲಯನ್ಸ್ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ರೋಹಿತಾಶ್ವ ಬಂಗ ಸ್ವಾಗತಿಸಿದರು. ನಾಗರಿಕ ಸೇವಾ ಸಮಿತಿಯ ಸಂಚಾಲಕ ಶ್ರೀಧರ ಅಮೀನ್ ಪ್ರಸ್ತಾವಿಸಿದರು. ನಿಯೋಜಿತ ಕಾರ್ಯದರ್ಶಿ ಡಾ. ದಿವ್ಯ ವಿ. ಶೆಟ್ಟಿ ವಂದಿಸಿದರು. ಸುನೀಲ್ ಬಿ. ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಸದಸ್ಯರಾದ ಮದ್ವರಾಜ್ ಕಲ್ಮಾಡಿ, ಪ್ರಶಾಂತ್ ಕೋಟ್ಯಾನ್, ರಾಮಕೃಷ್ಣ ರಾವ್, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ ಪೂಜಾರಿ, ದೇವಪ್ಪ ಪೂಜಾರಿ, ಡೋನಾಲ್ಡ್ ಬಂಟ್ವಾಳ ಮತ್ತಿತರರು ಸಹಕರಿಸಿದರು.
Advertisement







