
ಬಂಟ್ವಾಳ: ನೂತನವಾಗಿ ಸ್ಥಾಪನೆಯಾದ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ.ಅಪರೇಟಿವ್ ಸೊಸೈಟಿ ನಿ. ಇದರ ಉದ್ಘಾಟನಾ ಸಮಾರಂಭ ಬಿ.ಸಿ.ರೋಡಿನ ಶಕ್ತಿ ಕೌಂಪೌಂಡ್ ನಲ್ಲಿ ನಡೆಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವೆಂಕಟರಮಣ ಅಸ್ರಣ್ಣ ಆಡಳಿತ ಕಚೇರಿಯನ್ನು ಉದ್ಘಾಟಿಸಿ ದೀಪ ಪ್ರಜ್ವಲಿಸಿದರು. ಬಳಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಆಶೀರ್ವಚನ ನೀಡಿ ಕಲಾಸೇವೆ ಮಾಡುತ್ತಿರುವ ಉದಯ ವೆಂಕಟೇಶ್ ಭಟ್ ದಂಪತಿ ಸಹಕಾರಿ ಸಂಘವನ್ನು ಸ್ಥಾಪಿಸಿ ಗ್ರಾಹಕರಿಗೆ ಸೇವೆ ನೀಡುವ ಕಾರ್ಯಕ್ಕೆ ಮುಂದಾಗಿರುವುದು ಅಭಿನಂದನೀಯ. ದೇವರ ಅನುಗ್ರಹದಿಂದ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ನಿರ್ದೇಶಕಿ ಭಾರತಿ ಜಿ. ಭಟ್ ನಿರಖು ಠೇವಣಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ಸಹಕಾರಿ ತತ್ವ ಎನ್ನುವುದು ವೇದಗಳ ಕಾಲದಿಂದಲ್ಲೇ ರಕ್ತಗತವಾಗಿ ಬಂದಿದೆ. ಇಂದಿನ ಕಾಲಘಟದಲ್ಲಿ ಸಹಕಾರಿ ತತ್ವ ಅಗತ್ಯವಾಗಿ ಬೇಕಿದ್ದು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಹೋಲಿಸಿದರೆ ಇಂದು ಸಹಕಾರಿ ಸಂಘಗಳು ಜನರಿಗೆ ಹೆಚ್ಚು ಆಪ್ತವಾಗಿದೆ ಎಂದರು.

ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ಜೀವಂದರ್ ಜೈನ್ ಸಹಕಾರಿಯ ನಾಮಫಲಕ ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಭದ್ರತಾ ಕೊಠಡಿ ಉದ್ಘಾಟಿಸಿದರು, ಶ್ರೀ ಮಾತ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಕುಲಾಲ್ ನಗದು ಕೌಂಟರ್ ಉದ್ಘಾಟಿಸಿದರು, ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಗಣಕ ಯಂತ್ರ ಉದ್ಘಾಟಿಸಿದರು, ವಕೀಲ ಅಶ್ವನಿ ಕುಮಾರ್ ರೈ ಶರ್ವಾಣಿ ನಗದು ಪತ್ರ ಬಿಡುಗಡೆಗೊಳಿಸಿದರು. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷ ಬಿ. ವಿಶ್ವನಾಥ ಶೇರು ಪತ್ರ ಬಿಡುಗಡೆ ಗೊಳಿಸಿದರು.
ಸೊಸೈಟಿಯ ಅಧ್ಯಕ್ಷೆ ರೋಹಿಣಿ ಉದಯ್ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಸಹಕಾರದಿಂದಾಗಿ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ, ಎಲ್ಲರ ಸಲಹೆ, ಸಹಕಾರ ಪಡೆದು ಕೊಂಡು ಸಂಘವನ್ನು ಮುನ್ನಡೆಸುವುದಾಗಿ ತಿಳಿಸಿದರು.
ಸಜೀಪ ಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಡುಪಿ ದ.ಕ. ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್., ಉಪಾಧ್ಯಕ್ಷ ಅವಿನಾಶ್ ಹಾಗೂ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಭೇಟಿ ನೀಡಿ ಶುಭಹಾರೈಸಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉದಯ ವೆಂಕಟೇಶ್ ಸ್ವಾಗತಿಸಿ, ವಂದಿಸಿದರು, ಆರ್ ಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
Advertisement







