
ಬಂಟ್ಬಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಇದರ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಕಾಲ ವಾಮದ ಪದವು ಹೈಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿ ಹಮ್ಮಿಕೊಂಡಿದ್ದು ಸಮಾರೋಪ ಕಾರ್ಯಕ್ರಮ ಗುರಿವಾರ ನಡೆಯಿತು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ವಹಿಸಿ
ದ್ದರು. ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ದೀಪ ಪ್ರಜ್ವಲಿಸಿದರು.

ವಗ್ಗ ವಲಯದ ಜನಜಾಗ್ರತಿ ವೇದಿಕೆಯ ಸದಸ್ಯ ನವೀನ್ ಚಂದ್ರ ಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾತನಾಡಿದರು.
ಸೇವಾಪ್ರತಿನಿಧಿ ಮೋಹನ್ ದಾಸ್, ಕೇಂದ್ರದ ಸಂಯೋಜಕಿ ಗುಣವತಿ ಉಪಸ್ಥಿತರಿದ್ದರು. ಟ್ಯೂಷನ್ ಪಡೆದ ವಿದ್ಯಾರ್ಥಿಗಳು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯ ಬಾಲಕೃಷ್ಣ ಸ್ವಾಗತಿಸಿ,
ಶಿಕ್ಷಕ ಸುಧಾಕರ್ ವಂದಿಸಿದರು. ತಾಲೂಕು ಸಮನ್ವಯಧಿಕಾರಿ ಶೃತಿ ಕಾರ್ಯಕ್ರಮ ನಿರೂಪಿಸಿದರು.
Advertisement







