
ಬಂಟ್ವಾಳ: ಬಿ.ಸಿ.ರೋಡಿನ ಕೇಂದ್ರಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಎ.4ರಿಂದ ಎ.9ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಪದ್ಮನಾಭ ತಂತ್ರಿ ಶನಿವಾರ ಬೆಳಿಗ್ಗೆ ದೇವಸ್ಥಾನದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಅವರು ಮಾತನಾಡಿ ತುಳುನಾಡಿನ ಜೀವನಾಡಿ ಎನ್ನುವಂತೆ ದೈವ ದೇವರುಗಳು ಇಲ್ಲಿ ಹಾಸು ಹೊಕ್ಕಾಗಿದ್ದಾರೆ ಎಂದರು.
ವವಿಧ ಬಗೆಯ ಕಲೆಗಳನ್ನು ಬೆಳೆಸಿದ ಕೀರ್ತಿ ಅವಿಭಜಿತ ದ.ಕ. ಜಿಲ್ಲೆಗಿದೆ. ಕಲೆಯ ಉಪಾಸನೆಯೇ ದೇವರ ಉಪಾಸನೆ. ನಮ್ಮನ್ನು ನಾವು ಅರಿತುಕೊಂಡು ಸ್ವತಂತ್ರವಾಗಿ ಬದುಕಬೇಕೆನ್ನುವುದೇ ಸನಾತನ ಧರ್ಮದ ಸಂಸ್ಕೃತಿ ಎಂದು ತಿಳಿಸಿದರು.

ನಮಲ್ಲಿ ನಾವು ವಿಶ್ವಾಸವನ್ನು ಕಳೆದುಕೊಂಡಾಗ ನಾವು ಬೇರೆಯವರಲ್ಲೂ ಅವಿಶ್ವಾಸವನ್ನು ಕಾಣುತ್ತೇವೆ. ಶಾಂತಿ, ಆಧ್ಯಾತ್ಮಿಕ ಶಕ್ತಿಗಾಗಿ ಇಂದು ಪ್ರಪಂಚದ ಬೇರೆ ರಾಷ್ಟ್ರಗಳು ಭಾರತ ವನ್ನು ನೋಡುತ್ತಿದೆ. ಆ ನಿಟ್ಟಿನಲ್ಲಿ ಒಂದು ಕ್ಷೇತ್ರ ಬೆಳಗಿದರೆ ಆ ಊರೇ ಅಭಿವೃದ್ದಿಯಾಗುತ್ತದೆ ಎಂದು ತಿಳಿಸಿದರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ, ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ಸಹ ಕಾರ್ಯಧ್ಯಕ್ಷ ಜಗನಾಥ ಚೌಟ ಮಾಣಿ ಬದಿಗುಡ್ಡೆ ಮಾತನಾಡಿ ಬ್ರಹ್ಮಕಲಶಾಭಿಷೇಕದ ಈ ಪುಣ್ಯಕಾರ್ಯಕ್ಕೆ ಎಲ್ಲರೂ ಸಹಕಾರ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ನಾರಾಯಣ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಪ್ರಮುಖರಾದ ರಾಜೇಶ್ ಎಲ್. ನಾಯಕ್,
ಬಿ.ಮೋಹನ್, ದಿವಾಕರ ಪಂಬದಬೆಟ್ಟು, ಲೋಕನಾಥ ಶೆಟ್ಟಿ, ಸತೀಶ್ ಭಂಡಾರಿ, ಗೋಪಾಲ ಸುವರ್ಣ, ಚಂದ್ರಶೇಖರ ಪೂಜಾರಿ, ಉಮೇಶ್ ಕುಮಾರ್ ವೈ, ಸದಾನಂದ ಶೆಟ್ಟಿ, ರಮೇಶ್ ಸಾಲ್ಯಾನ್, ರವೀಂದ್ರ ಕಂಬಳಿ, ಪ್ರಸಾದ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಸಂಜೀವ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ ವಂದಿಸಿದರು. ಮೋಹನದಾಸ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
Advertisement







