ಬಂಟ್ವಾಳ : ಬಿ.ಸಿ ರೋಡಿನ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜು ಸಿ.ಇ.ಟಿ ಪರೀಕ್ಷಾ ಕೇಂದ್ರವಾಗಿ ಆಯ್ಕೆಯಾಗಿದ್ದು ನಾಳೆಯಿಂದ ಸಿ.ಇ.ಟಿ ಪರೀಕ್ಷೆ ಆರಂಭವಾಗಲಿದೆ.
ಗುರುವಾರದಂದು ಜೀವಶಾಸ್ತ್ರ ಮತ್ತು ಗಣಿತ ಹಾಗೂ ಶುಕ್ರವಾರದಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.
ಬಿ.ಮೂಡ ಪರೀಕ್ಷಾ ಕೇಂದ್ರದಲ್ಲಿ 240 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಕಾಲೇಜಿನ ಸಿ ಇ ಟಿ ಸಂಕೇತ ಸಂಖ್ಯೆ 750 ಆಗಿದೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಯೂಸುಫ್ ವಿಟ್ಲ ಮಾಹಿತಿ ನೀಡಿರುತ್ತಾರೆ.
Advertisement
Advertisement