ಬಂಟ್ವಾಳ: ಜೆಸಿಐ ಬಂಟ್ವಾಳದ 2024ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಾಪ್ರದಾನ ಸಮಾರಂಭ ಬಂಟರ ಭವನದಲ್ಲಿ ನಡೆಯಿತು.
ಶಕ್ತಿ ಎಜುಕೇಶನ್ ಟ್ರಸ್ಟ್ ನ ಮುಖ್ಯ ಸಲಹೆಗಾರ ರಮೇಶ್ ಕೆ. ಕಾರ್ಯಕ್ರಮ ಉದ್ಘಾಟಿಸಿದರು.
Advertisement
ಮುಖ್ಯ ಅತಿಥಿಯಾಗಿ ವಲಯ 15 ರ ಪ್ರಾಂತ್ಯ ಬಿ ಯ ಉಪಾಧ್ಯಕ್ಷ ಶಂಕರ್ ರಾವ್ ಭಾಗವಹಿಸಿದ್ದರು.
ನಿರ್ಗಮನ ಅಧ್ಯಕ್ಷ ರಾಜೇಂದ್ರ ಕೆ. ನೂತನ ಅಧ್ಯಕ್ಷೆ ರಶ್ಮಿ ಶೆಟ್ಟಿ ಯವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಪದಾಧಿಕಾರಿಗಳು ಹಾಗೂ ನೂತನ ಸದಸ್ಯರುಗಳಿಗೆ ವಲಯ ಉಪಾಧ್ಯಕ್ಷರು ಪ್ರಮಾಣ ವಚನ ಭೋದಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಶ್ರೀನಿವಾಸ್ ಅರ್ಬಿಗುಡ್ಡೆ, ಕೋಶಾಧಿಕಾರಿ ಮನೋಜ್ ಕನಪಾಡಿ, ಲೇಡಿ ಜೇಸಿ ಅಧ್ಯಕ್ಷೆ ಆಶಾಮಣಿ ಡಿ. ರೈ, ನಿಕಟಪೂರ್ವಾಧ್ಯಕ್ಷ ರೋಶನ್ ರೈ, ನಿರ್ಗಮನ ಲೇಡಿ ಜೇಸಿ ಅಧ್ಯಕ್ಷೆ ದೀಪ್ತಿ ಆರ್. ರೈ, ಜೆಜೆಸಿ ಅಧ್ಯಕ್ಷೆ ವೀಕ್ಷಿತಾ ಉಪಸ್ಥಿತರಿದ್ದರು
Advertisement