
ಬಂಟ್ವಾಳ: ಜೆಸಿಐ ಬಂಟ್ವಾಳಕ್ಕೆ ವಲಯ ೧೫ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಜಿ ವೀರಕಂಬದ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಗೆ ೧೦ ಚಾರ್ಟ್ ಪಿನ್ ಬೋರ್ಡನ್ನು ಕೊಡುಗೆಯಾಗಿ ನೀಡಲಾಯಿತು.





ಬಳಿಕ ಜೆಸಿಐ ಬಂಟ್ವಾಳದ ವತಿಯಿಂದ ವಲಯಾಧ್ಯಕ್ಷರನ್ನು ಗೌರವಿಸಲಾಯಿತು. ಈ ಸಂದರ್ಭ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಕಾರ್ತಿಕ್ ಶಾಲಾ ಮುಖ್ಯ ಶಿಕ್ಷಕಿ ಬೇನಾಡಿಕ್ಟ , ಎಸ್ಡಿಎಂಸಿ ಉಪಾಧ್ಯಕ್ಷ ವಿಜಯ, ಜೆಸಿಐ ಬಂಟ್ವಾಳದ ಪೂರ್ವಾಧ್ಯಕ್ಷರಾದ ನಾಗೇಶ್ ಬಾಳೆಹಿತ್ಲು, ಸದಾನಂದ ಬಂಗೇರ, ಲೋಕೇಶ್ ಸುವರ್ಣ, ನಿಕಟ ಪೂರ್ವಧ್ಯಕ್ಷ ರೋಷನ್ ರೈ, ಕಾರ್ಯದರ್ಶಿ ರಶ್ಮಿ ಶೆಟ್ಟಿ ಉಪಾಧ್ಯಕ್ಷ ಕಿಶೋರ್ ಆಚಾರ್ಯ, ಸದಸ್ಯರಾದ ಯೋಗೀಶ್, ರೋಷನ್ ಕಲ್ಲಡ್ಕ, ಕಾರ್ತಿಕ್ ರೈ, ಉಮೇಶ್ ಪೂಜಾರಿ, ಜೆಜೆಸಿ ಅಧ್ಯಕ್ಷ ಜಯರಾಜ್ ಉಪಸ್ಥಿತರಿದ್ದರು.
