ಕಾಸರಗೋಡು: ಕೇರಳ ರಾಜ್ಯದ ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಕಥಾಬಿಂದು ಪ್ರಕಾಶನ ,ಪಾಂಗೋಡು ದುರ್ಗಾ ಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿ ಕಾಸರಗೋಡು ಜಿಲ್ಲಾಘಟಕದ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಆಯೋಜಿಸಿದ ಕಾಸರಗೋಡು ಕನ್ನಡ ಭವನ ಕನ್ನಡ ಸಂಸ್ಕೃತಿ ಉತ್ಸವ ದಲ್ಲಿ ಬೊಳುವಾರು ನಿವಾಸಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರುರವರನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕನ್ನಡ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀಮದ್ ಎಡನೀರು ಮಹಾಸಂಸ್ಥಾನ ದವರು ಕನ್ನಡ ಭವನ ಕನ್ನಡ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.ಕನ್ನಡ ಭವನದ ಸ್ಥಾಪಕಾಧ್ಯಕ್ಷರಾದ ವಾಮನರಾವ್ ಬೇಕಲ್ ಅಧ್ಯಕ್ಷ ತೆ ವಹಿಸಿದ್ದರು.ಕಥಾಬಿಂದು ಪ್ರಕಾಶನದ ಪಿ.ವಿ.ಪ್ರದೀಪ್ ಕುಮಾರ್ ಸಾಹಿತಿ ಡಾ.ರಮಾನಂದ ಬನಾರಿ ,ಜಯಾನಂದ ಪೆರಾಜೆ,ಶ್ರೀ ಕೃಷ್ಣ ಯ್ಯ ಅನಂತಪುರ, ಪತ್ರಕರ್ತ ವಿಶಾಲಾಕ್ಷ ಪುತ್ರಕಳ, ಹಿರಿಯ ಸಾಹಿತಿ ರಾಧಾಕೃಷ್ಣ ಕೆ ಉಳಿಯತಡ್ಕ,ಶ್ರೀ ಎ.ಆರ್ ಸುಬ್ಬಯ್ಯ ಕಟ್ಟೆ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ರು, ಕನ್ನಡ ಭವನ ಸಂಚಾಲಕಿ ಸಂಧ್ಯಾರಾಣಿ ಟೀಚರ್,ಪ್ರೊ ಎ.ಶ್ರೀನಾಥ್ ಕಾಸರಗೋಡು,ಕಥಾಬಿಂದು ಪ್ರಕಾಶನ ದ ಸಂಚಾಲಕಿ ರೇಖಾ ಸುದೇಶ್ ರಾವ್, ಪ್ರಾಂಶುಪಾಲ ರಾಜೇಶ್ಚಂದ್ರ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ
ಪತ್ರಕರ್ತ ಸಿ.ವಾಯ್ ಮೆಣಸಿನಕಾಯಿಯವರ ಕರುಣೆ ಯ ತೋಟ ಕವನ ಸಂಕಲನ, ಅಗ್ನಿ ಪರೀಕ್ಷೆ ಕಥಾಸಂಕಲನ ಲೋಕಾರ್ಪಣೆ ಗೊಳಿಸಲಾಯಿತು.