ಬಂಟ್ವಾಳ: ಸಂಘಟನೆಯ ಮೂಲ ಉದ್ದೇಶವೇ ಮಕ್ಕಳಲ್ಲಿ ನೈತಿಕತೆಯ ಜಾಗೃತಿ ಮೂಡಿಸುವುದು. ಮಕ್ಕಳು ಶಾಲೆಯ ಶಿಕ್ಷಣವನ್ನು ಪಡೆದು ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ ಅದೇ ರೀತಿ ಸಂಸ್ಕಾರ ಶಿಕ್ಷಣ ಮಾನಸಿಕತೆ ಮತ್ತು ಬೌದ್ಧಿಕತೆಯ ಬೆಳವಣಿಗೆಯನ್ನು ಮಾಡಬೇಕು. ಆ ಮೂಲಕ ಆಧಾತ್ಮಿಕತೆಯ ಬೆಳವಣಿಗೆ, ಧಾರ್ಮಿಕ ಮನೋಭಾವದ ಅಭಿವೃದ್ಧಿಯಾಗಬೇಕು ಎಂದು ಸಂಸ್ಕಾರ ಭಾರತಿ ದ.ಕ. ಜಿಲ್ಲಾಧ್ಯಕ್ಷ ತಾರನಾಥ ಕೊಟ್ಟಾರಿ ಹೇಳಿದರು.
ಪುದು ಗ್ರಾಮದ ನಾಣ್ಯದ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ಸಂಸ್ಕಾರ ಭಾರತಿ ದ.ಕ. ಜಿಲ್ಲೆ ಇದರ ಬಂಟ್ವಾಳ ಘಟಕದ ವತಿಯಿಂದ ತೃಷಾ ಶೆಟ್ಟಿ ನಿರ್ದೇಶನದಲ್ಲಿ ನಡೆದ ಐದು ದಿನಗಳ ಸಂಸ್ಕಾರ ಸೌರಭ ಮಕ್ಕಳ ಬೇಸಿಗೆ ಹಬ್ಬದ ಸಮಾರೋಪ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ರಾಧಾಸುರಭಿ ಗೋ ಮಂದಿರದ ಸಂಸ್ಥಾಪಕ ಭಕ್ತಿ ಭೂಷಣ ಪ್ರಭೂಜಿ, ಸಂಸ್ಕಾರ ಭಾರತಿಯ ಮಲ್ಲಿಕಾ ಶೆಟ್ಟಿ, ಪುದು ಪಂಚಾಯತಿ ಸದಸ್ಯ ಮನೋಜ್ ಆಚಾರ್ಯ ನಾಣ್ಯ, ಉಮಾ ಚಂದ್ರಶೇಖರ ಉಪಸ್ಥಿತರಿದ್ದರು.
ಬೇಸಿಗೆ ಶಿಬಿರ ವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ತೃಷಾ ಶೆಟ್ಟಿ ಹಾಗು ಭಕ್ತಿ ಭೂಷಣ ಪ್ರಭೂಜಿ ಯವರನ್ನು ಸನ್ಮಾನಿಸಲಾಯಿತು.