ಬಂಟ್ವಾಳ: ತಾಲೂಕಿನ ವಗ್ಗ ಕುಲಾಲ ಸಮಾಜ ಸೇವಾ ಸಂಘದಿಂದ ಕುಲಾಲ ಸಮಾಜದ ಆಡಳಿತವಿರುವ ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಮೇ 14ರಂದು ಆರಂಭಗೊಂಡು 24ರ ವರೆಗೆ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ಮತ್ತು 95 ತಾಮ್ರ ಕಲಶ ಸೇವೆಯ ಬಾಬ್ತು ಒಟ್ಟು ರೂ. 2,87,739 ಹಣವನ್ನು ಜಿಲ್ಲಾ ಮಾತೃ ಸಂಘದ ಬ್ರಹ್ಮಕಲಶೋತ್ಸವ ಸಮಿತಿಗೆ ಹಸ್ತಾಂತರಿಸಲಾಯಿತು.
ವಗ್ಗ ವಲಯಕ್ಕೆ ಸಂಬಂದಿಸಿದ ಕುಲಾಲ ಸಮಾಜ ಬಾಂಧವರ ೪೧೦ ಮನೆಗಳಿಗೆ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿದ ಸಂದರ್ಭ ದೇಣಿಗೆಯನ್ನು ಸಂಗ್ರಹಿಸಲಾಯಿತು. ಕುಲಶೇಖರ ಕ್ಷೇತ್ರಕ್ಕೆ ಹಸ್ತಾಂತರಿಸುವ ಸಂದರ್ಭ ವಗ್ಗ ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಕುಲಾಲ್ ಹೇರೊಟ್ಟು, ಉಪಾಧ್ಯಕ್ಷ ಗೋಪಾಲ್ ಸಾಲ್ಯಾನ್ ಕಟ್ಲೋಡಿ ಮತ್ತು ಕಾರ್ಯದರ್ಶಿ ಚಂದು ಕುಲಾಲ್ ವಗ್ಗ, ಸದಸ್ಯರಾದ ಸತೀಶ್ ಮಧ್ವ, ವಿಜಯ್ ಪಣೆಕಲ, ಜಯಂತ ಬಂಗೇರ ಉಗ್ಗಬೆಟ್ಟು, ಕೃಷ್ಣ ಕುಲಾಲ್, ಚಂದ್ರಹಾಸ್ ಶೇರಬೆಟ್ಟು, ಉಮೇಶ್ ಅಲಂಪುರಿ, ರಮೇಶ್ ಕಟ್ಲೋಡಿ, ಸುಂದರ ಬಡಗುಂಡಿ, ಚಂದ್ರಹಾಸ ಮರಾಯಿದೊಟ್ಟು, ದಾಮೋದರ ಟೈಲರ್, ಚಂದ್ರಶೇಖರ್ ಕೇದಿಗೆ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಕೆ.ಸುಂದರ ಕುಲಾಲ್ ಶಕ್ತಿನಗರ, ದೇವಸ್ಥಾನದ ಆಡಳಿತ ಮೋಕ್ತೆಸರ ಪುರುಷೋತ್ತಮ ಕುಲಾಲ್ ಕಲ್ಬಾವಿ, ದಾಮೋದರ ಎ, ಅನಿಲ್ ದಾಸ್, ಪ್ರದೀಪ್ ಅತ್ತಾವರ ಮೂಲಕ ಹಸ್ತಾಂತರಿಸಲಾಯಿತು.