
ಬಂಟ್ವಾಳ: ಸಜೀಪ ಮಾಗಣೆಗೊಳಪಟ್ಟ ಮಿತ್ತಮಜಲು ಕ್ಷೇತ್ರದ ಬಿಸು ಜಾತ್ರೆ ಪ್ರಯುಕ್ತ
ಶನಿವಾರದಂದು ಪೂರ್ವಸಂಪ್ರದಾಯದಂತೆ ಕೋಳಿಕುಂಟ ನೆರವೇರಿತು. ಈ ಸಂದರ್ಭ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಪಾಲೆ ಮಂಟಪ ಸಂಸಾರ, ಗಡಿ ಪ್ರಧಾನರಾದ ಕೋಚುಭಂಡಾರಿ ಯಾನೆ ಮುಂಡಪ್ಪ ಶೆಟ್ಟಿ, ಅನುಪ್ ಆಳ್ವ, ದೇವಿಪ್ರಸಾದ್ ಪೂಂಜ, ಶಿವರಾಮ ಭಂಡಾರಿ, ಬಿಜಂದಾರ್ ಗುತ್ತು ಯಶೋಧರ ರೈ, ಎಸ್.ಶ್ರೀಕಾಂತ ಶೆಟ್ಟಿ, ಸಾನದ ಮನೆಯ ಕೋಚು ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಞ ಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಮಿತ್ತಮಜಲು ಕ್ಷೇತ್ರದ ಬಿಸು ಜಾತ್ರೆಯ ಪ್ರಯುಕ್ತ ಎ. 12ರಿಂದ ಎ.14ರವರೆಗೆ ಮೂರು ದಿನಗಳ ಚೆಂಡು ನಡೆಯಲಿದೆ, ಎ.14ರಂದು ಶುಕ್ರವಾರ ರಾತ್ರಿ ಒಲಸರಿ ನಡೆದು ದೈವದ ಮೆಚ್ಚಿ, ಎ.15ರಂದು ರಾತ್ರಿ 10ಕ್ಕೆ ಕೆರೆನೇಮ, ಎ. 16ರಂದು ಬೆಳಿಗ್ಗೆ ಗಂಟೆ 9ಕ್ಕೆ ಕೆರೆನೇಮ ಬಳಿಕ ಉಡುಕು ಬಲಿ ಹಾಗೂ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ. ಎ. 7ರಂದು ಪರಿವಾರ ದೈವದ ನೇಮೋತ್ಸವದ ಬಳಿಕ ಭಂಡಾರ ಇಳಿಯಲಿದೆ.
