ಬಂಟ್ವಾಳ: ದೇವರ ಆಶೀರ್ವಾದ, ಮತದಾರರು, ಕಾರ್ಯಕರ್ತರು ನೀಡಿದ ಸಹಕಾರದಿಂದ ಬಂಟ್ವಾಳದಲ್ಲಿ ಅಭೂತಪೂರ್ವ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಸರಪಾಡಿ ಶಕ್ತಿ ಕೇಂದ್ರದಲ್ಲಿ ನಡೆದ ಪ್ರಥಮ ಬಿಜೆಪಿ ಪ್ರಮುಖ ಕಾರ್ಯಕರ್ತರ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಮತದಾರರು ನೀಡಿದ ಪ್ರತಿಯೊಂದು ಮತಕ್ಕೆ ಯಾವುದೇ ಚ್ಯುತಿ ಬಾರದಂತೆ ಕಳೆದ ಐದು ಪೂರೈಸಿದ್ದೇನೆ. ಅಭಿವೃದ್ಧಿ ಜೊತೆಗೆ ಶಾಂತಿಯ ಬಂಟ್ವಾಳವಾಗಿ ಮಾಡಲು ಅವಕಾಶ ನೀಡಿದ ತಾಲೂಕಿನ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ಅವರು ಮುಂದಿನ ಅವಧಿಯಲ್ಲಿ ಮತ್ತೆ ಶಾಂತಿಯ ಬಂಟ್ವಾಳವಾಗಿ ಉಳಿಯಲು ಬಿಜೆಪಿ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ಕಾರ್ಯಕರ್ತರು ಜತೆಯಾಗಿ ಕೆಲಸ ಮಾಡಿ ಎಂದುಕರೆ ನೀಡಿದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿ ಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು. ಶಾಸಕ ರಾಜೇಶ್ ನಾಕ್ ಅವರ ವ್ಯಕ್ತಿತ್ವವನ್ನು ಹಾಗೂ ಮಾನವೀಯ ಗುಣಗಳ ಬಗ್ಗೆ ಮತದಾರರಿಗೆ ತಿಳಿಸುವ ಅಗತ್ಯವಿದೆ. ಗೊಂದಲದ ಗೂಡಾಗಿದ್ದ ಬಂಟ್ವಾಳವನ್ನು ಶಾಂತಿಯುತ ನವ ಬಂಟ್ವಾಳವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ ಜಾತ್ಯಾತೀತ ಶಾಸಕ ರಾಜೇಶ್ ನಾಕ್ ಅವರನ್ನು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡುವಲ್ಲಿ ಕಾರ್ಯಕರ್ತರು ಚುನಾವಣಾ ದಿನದವರೆಗೂ ವಿರಮಿಸದೆ ಕೆಲಸ ಮಾಡುವಂತೆ ಮನವಿ ಮಾಡಿದರು.
ಸರಪಾಡಿ ಶಕ್ತಿ ಕೇಂದ್ರದ ಪ್ರಮುಖ್ ದಯಾನಂದ ಶೆಟ್ಟಿ ಮುನ್ನಲಾಯಿ, ಸರಪಾಡಿ ಶಕ್ತಿ ಕೇಂದ್ರದ ಪ್ರಭಾರಿ ಸುರೇಶ್ ಕುಲಾಲ್, ಸರಪಾಡಿ ಗ್ರಾಮಪಂಚಾಯತಿ ಅಧ್ಯಕ್ಷೆ ಲೀಲಾವತಿ ಧರ್ಣಪ್ಪ ಪೂಜಾರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.