ಬಂಟ್ವಾಳ: ಕಾವಳಮೂಡೂರು ಹಾಗೂ ದೇವಶ್ಯಮೂಡೂರು ಗ್ರಾಮದ ಜನತೆಗೆ ಉತ್ತಮ ಸೇವೆ ನೀಡುತ್ತಾ, ಅಬಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಸಂಘದ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಪಪ್ರಚಾರ ನಡೆಸುತ್ತಿದ್ದು,
ಸಂಘದ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಓರ್ವ ಸಿಬ್ಬಂದಿ ಮತ್ತು ಸಾಲಗಾರ ಸದಸ್ಯರ ನಡುವಿನ ಸಾಲದ ವ್ಯವಹಾರಕ್ಕೂ ಸಂಘದ ಆಡಳಿತ ಸಮಿತಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಧ್ಯಕ್ಷ ಪದ್ಮಶೇಖರಜೈನ್ ನೇತೃತ್ವದ ಆಡಳಿತ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದ ಸಂಘದ ಆಡಳಿತ ಮಂಡಳಿಯ ವಿರುದ್ದ ಕೆಲ ಸ್ಥಾಪಿತ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿದ್ದು,
ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಕೋಟ್ಯಾನ್ ಹಾಗೂ ಓರ್ವ ಸಿಬ್ಬಂದಿ ಕೆಲವು ಸದಸ್ಯರ ಹೆಸರಿನಲ್ಲಿ ಸಾಲವನ್ನು ಪಡೆದಿರುವ ಕುರಿತು ಮೇಲಾಧಿಕಾರಿಗಳಿಂದ ಶಾಸನಾತ್ಮಕವಾದ ತನಿಖೆಯು ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಆ ಸಾಲಗಳನ್ನು ಸದಸ್ಯರಿಂದ ಬಂದ ಸಾಲದ ಅರ್ಜಿ ಹಾಗೂ ದಾಖಲೆಗಳನ್ನು ಆಡಳಿತ ಸಮಿತಿ ಸಭೆಗೆ ಹಾಜರುಪಡಿಸಿ ಶಿಫಾರಸ್ಸು ಮಾಡಿದ ಮೇರೆಗೆ ಆಡಳಿತ ಸಮಿತಿಯು ಸಾಲವನ್ನು ಮಂಜೂರು ಮಾಡಿರುವುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೆಲ ವದಂತಿಗಳ ಹಿನ್ನಲೆಯಲ್ಲಿ ನಮ್ಮ ಸಂಘದ ಬಹುತೇಕ ಸದಸ್ಯರು ಹಾಗೂ ಗ್ರಾಹಕರು ಸಂಘಕ್ಕೆ ಭೇಟಿ ನೀಡಿ ಅವರವರ ವ್ಯವಹಾರಗಳ ಬಗ್ಗೆ ಪರಿಶೀಲಿಸಿ ದೃಡೀಕರಣ ಪಡಕೊಂಡಿರುತ್ತಾರೆ. ಇತ್ತೀಚೆಗೆ ಸಂಘದ ಸದಸ್ಯರು ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಕೋಟ್ಯಾನ್ ಹಾಗೂ ಓರ್ವ ಸಿಬ್ಬಂದಿಯು ಸಾಲದ ದಾಖಲೆಗಳಲ್ಲಿ ವಂಚನೆ ಎಸಗಿರುತ್ತಾರೆ ಎಂದು ಆರೋಪಿಸಿರುವ ಹಿನ್ನಲೆಯಲ್ಲಿ ಕೇಶವ ಕೋಟ್ಯಾನ್ ಹಾಗೂ ಒರ್ವ ಸಿಬ್ಬಂದಿಯನ್ನು ಈ ಹಿಂದೆಯೇ ಪದಚ್ಯುತಿಗೊಳಿಸಲಾಗಿದೆ ಎಂದು ಅಧ್ಯಕ್ಷ ಪದ್ಮಶೇಖರ್ ಜೈನ್ ನೇತೃತ್ವದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಕೆಲ ಸದಸ್ಯರ ಹೆಸರಿನಲ್ಲಿ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಒರ್ವ ಸಿಬ್ಬಂದಿ ಸೇರಿ ಮಾಡಿದ ಸಾಲಗಳನ್ನು ಹೊರತು ಪಡಿಸಿ ಈ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದ್ದು, ಉಳಿದಂತೆ ಅಂಕಿ ಅಂಶಗಳೆಲ್ಲವು ಸರಿಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಮತ್ತು ಸಿಬ್ಬಂದಿ ಮಾಡಿರಬಹುದಾದ ತಪ್ಪುಗಳಿಗೆ ಅವರೇ ವೈಯಕ್ತಿಕ ಜವಾಬ್ದಾರರಾಗಿದ್ದು, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಮತ್ತು ಸಿಬ್ಬಂದಿಯ ವಿರುದ್ಧ ತನಿಖೆ ನಡೆಸುವಲ್ಲಿ ಆಡಳಿತ ಮಂಡಳಿಯು ಸನ್ನದ್ದವಾಗಿದೆ, ತಪ್ಪತಸ್ಥರೆಂದು ಕಂಡು ಬಂದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದ್ದು, ಸಂಘದ ವಿರುದ್ಧದ ಅಪಪ್ರಚಾರಕ್ಕೆ ಕಿವಿಗೊಡದೆ ಸಂಘದ ಎಲ್ಲಾ ಸದಸ್ಯರು ಮತ್ತು ಗ್ರಾಹಕರು ಸಹಕಾರ ಸಂಘದೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಾವಳಮೂಡೂರು ವ್ಯ. ಸೇ. ಸ. ಸಂಘದಲ್ಲಿ ಪಾಲು ಬಂಡವಾಳ ಸುಮಾರು ೧.೨೦ ಕೋ.ರೂ., ಠೇವಣಾತಿಗಳು ಸುಮಾರು ೧೪.೩೪ ಕೋ.ರೂ. ಇರುವುದು, ಡಿಸಿಸಿ ಬ್ಯಾಂಕಿನಿಂದ ಪಡೆದ ಸಾಲಗಳು ಸುಮಾರು ೯.೧೯ ಕೋ.ರೂ.ಆಗಿದೆ. ಹೂಡಿಕೆಗಳಲ್ಲಿ ೪.೧೬ ಕೋ.ರೂ.,ಹಾಗೂ ಸದಸ್ಯರಿಗೆ ನೀಡಿದ ಸಾಲಗಳು ೨೦.೫೭ ಕೋಟಿಯಷ್ಟಿದ್ದು, ಸಂಘವು ದಾಖಲೆ ಮಟ್ಟದಲ್ಲಿ ಬೆಳವಣಿಗೆ ಕಾಣುವಲ್ಲಿಯು ಸಂಘದ ಆಡಳಿತ ಮಂಡಳಿಯು ಪ್ರಮುಖ ಪಾತ್ರ ವಹಿಸಿರುತ್ತದೆ ಎಂದು ಅಧ್ಯಕ್ಷ ಪದ್ಮಶೇಖರ್ ಜೈನ್ ನೇತೃತ್ವದ ಆಡಳಿತ ಸಮಿತಿಯ ಪ್ರಕಟಣೆ ತಿಳಿಸಿದೆ.
ಮುಖಪುಟ
ಸುದ್ದಿ
ಬಂಟ್ವಾಳ ಫರಂಗಿಪೇಟೆ
ವಾಮದಪದವು
ವಿಟ್ಲ
ಮಾಣಿ
ಕಲ್ಲಡ್ಕ
ವಿಶೇಷ-ವೈವಿಧ್ಯ
ಸಮಾಜಮುಖಿ
ಯೂಟ್ಯೂಬ್ ಚಾನೆಲ್/ವಿಡಿಯೋ
ಸಿ.ಇ.ಒ.,ಸಿಬ್ಬಂದಿ ಹಾಗೂ ಸಾಲಗಾರ ಸದಸ್ಯರ ನಡುವಿನ ಸಾಲದ ವ್ಯವಹಾರಕ್ಕೂ ಆಡಳಿತ ಸಮಿತಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಪದ್ಮಶೇಖರ್ ಜೈನ್ ಸ್ಪಷ್ಟನೆ
Advertisement
Advertisement
Previous Articleಸಜೀಪಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಕಲಿಕಾ ಚೇತರಿಕೆ ಕಾರ್ಯಗಾರ
Next Article ಲಯನ್ಸ್ ಅಂತರ್ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ
Related Posts
Add A Comment