
ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಆಶ್ರಯದಲ್ಲಿ 26 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ತುಂಬೆ ರಾಮಲ್ ಕಟ್ಟೆಯ ಶ್ರೀ ಶಾರದಾ ಸಮುದಾಯ ಭವನದಲ್ಲಿ ನಡೆಯಿತು.
ಬೆಳಿಗ್ಗೆ ಉದ್ಯಮಿ ಬಸ್ತಿ ಮಾಧವ ಶೆಣೈ ಧ್ವಜಾರೋಹಣ ನೆರವೇರಿಸಿದರು. ಬಳಿಕ ಭಜನಾ ಸಂಕೀರ್ತನೆ,ಅಕ್ಷರ ಲೇಖನಾರಂಭ ಸಂಸ್ಕಾರ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಪೊಳಲಿ ಗಿರಿ ಪ್ರಕಾಶ್ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಶಾರದಾ ಮಾತೆಗೆ ಮಹಾಪೂಜೆ ನೆರವೇರಿತು

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಜಪ್ಪುವಿನ ಶ್ರೀ ಅಂಬಾ ಮಹೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ಎ. ದೀಪ ಪ್ರಜ್ವಲಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಪ್ರತೀ ವಸ್ತುವಿನಲ್ಲೂ ದೇವರನ್ನು ಕಂಡು ಆರಾಧನೆ ಮಾಡುವ ಅವಕಾಶ ಇರುವ ಜಗತ್ತಿನ ಏಕೈಕ ಧರ್ಮ ಹಿಂದೂ ಧರ್ಮ ಎಂದು ತಿಳಿಸಿದರು.
ಮುಖ್ಯ ಅತಿಥಿ ಎಆರ್ ಟಿ ಓ ಚರಣ್ ಮಾತನಾಡಿ ಮಹಾಲಕ್ಷ್ಮೀಯ ಮೂಲಕ ರಾಜಸ ಆರಾಧನೆ, ಕಾಳಿಯ ಮೂಲಕ ತಾಮಸ ಆರಾಧನೆ, ಸರಸ್ವತಿಯ ಮೂಲಕ ಸಾತ್ವಿಕ ಆರಾಧನೆ ಮಾಡಲಾಗುತ್ತದೆ ಎಂದರು.
ದ..ಕ. ಗ್ಯಾರೇಜು ಮಾಲಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ ಮಾತನಾಡಿ ಶಾರದೆ ವಿದ್ಯಾಧಿದೇವತೆಯಾಗಿ ನಮ್ಮೆಲ್ಲರನ್ನು ಸಲಹುತ್ತಾಳೆ. ಆಕೆ ಜ್ಞಾನದ ಸಂಕೇತ ಎಂದು ತಿಳಿಸಿದರು. ಮಂಗಳೂರು ವಿವಿ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ ಇದು ಬರೀ ಸಭಾಂಗಣವಲ್ಲ. ಶಕ್ತಿಯ ಆಲಯ. ಇಲ್ಲಿ ಧನಾತ್ಮಕತೆಯ ಕಂಪನವಿದೆ ಎಂದ ಅವರು ಜನರಿಗೆ ಧರ್ಮ ಜಾಗೃತಿ ಮೂಡಿಸುವ ಕಾರ್ಯವನ್ನು ತುಂಬೆಯ ಶ್ರೀಶಾರದಾ ಪ್ರತಿಷ್ಠಾನ ಮಾಡುತ್ತಿದ್ದು ಇದಕ್ಕೆಲ್ಲಾ ತಾಯಿ ಶಾರದೆ ಪ್ರೇರಣೆ ಎಂದರು.
ಕಾರ್ಯಕ್ರಮದಲ್ಲಿ ಸ್ವಚ್ಚತಾ ದಂಡಯಾತ್ರೆ ನಡೆಸುತ್ತಿರುವ ನಾಗರಾಜ್ ಬಜಾಲ್ ಅವರನ್ನು ಸನ್ಮಾನಿಸಲಾಯಿತು.

ಹೂಹಾರ ಕಟ್ಟುವ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ದಿನೇಶ್ ಕೊಟ್ಟಿಂಜ ಮತ್ತಿತರರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆಯ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕಾರ್ಯದರ್ಶಿ ದಿವಾಕರ ಪೇರ್ಲಬೈಲು, ಕೋಶಾಧಿಕಾರಿ ರಾಘವ ಬಂಗೇರ ಪೇರ್ಲಬೈಲು, ಉಪಾಧ್ಯಕ್ಷೆ ಶೋಭಾ ಗೋಪಾಲ ಮೈಂದನ್,
ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಕಿಶೋರ್ ನಿಸರ್ಗ ದೇಮುಂಡೆ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಸಾಲ್ಯಾನ್ ತುಂಬೆ, ಜೊತೆ ಕಾರ್ಯದರ್ಶಿ ರವಿರಾಜ್, ಕೋಶಾಧಿಕಾರಿ ಸದಾನಂದ ಕೋಡಿಯಡ್ಕ ಉಪಸ್ಥಿತರಿದ್ದರು
ಗೌರವ ಸಲಹೆಗಾರ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ದೀಕ್ಷಿತ್ ಮಜಿ ವಂದಿಸಿದರು.ಸಂತೋಷ್ ಕುಮಾರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು
Advertisement







