
ಮಂಗಳೂರು:ಗ್ರಾಮೀಣ ಭಾಗದ ಜನರ ಚಟುವಟಿಕೆಯನ್ನು ಗುರುತಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ದೇಶದ ಸಾಮಾನ್ಯ ಜನರಿಗೂ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿಗಳು ಸಿಗುವ ಕಾರ್ಯವನ್ನು ಮೋದಿ ಮಾಡುತ್ತಿದ್ದಾರೆ. ನಮ್ಮ ದೇಶಕ್ಕೆ ಇಂತಹ ನಾಯಕನಿರುವುದು ನಮ್ಮಹೆಮ್ಮೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಓಬಿಸಿ ಮೋರ್ಚಾ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಕೋಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ನಡೆದ ಸ್ವದೇಶಿ ಉತ್ಪನ್ನಗಳ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಎಲ್ಲರಿಗೂ ಸ್ಪೂರ್ತಿ ತುಂಬುವ ಕೆಲಸವನ್ನು ಮಂಗಳೂರು ಮಂಡಲ ಓಬಿಸಿ ಮೋರ್ಚಾ ಮಾಡಿದೆ ಎಂದರು.

ಮುಖ್ಯ ಅತಿಥಿ ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್ ಸಿ. ನಾರಾಯಣ ಮಾತನಾಡಿ ಹಿಂದುಳಿದ ವರ್ಗದ ನಾಯಕ ದೇಶದ ಪ್ರಧಾನಿಯಾಗಿರುವುದು ನಮ್ಮಹೆಮ್ಮೆ ಎಂದರು.
ಸ್ವದೇಶಿ ಮೇಳಕ್ಕೂ, ಹಿಂದುಳಿದ ವರ್ಗಕ್ಕೂ ಒಂದು ಸಂಬಂಧ ಇದೆ. ಸಮಾಜದ ಕುಲಕಸುಬುದಾರರ ಕಾಯಕ ಸಾರ್ವಜನಿಕರಿಗೆ ಉಪಯೋಗವಾಗು ನಿಟ್ಟಿನಲ್ಲಿ ಕಾರ್ಯಕ್ರಮ ಸಂಘಟಿಸಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು ಮಾತನಾಡಿ ಇದೊಂದು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮ ಎಂದು ಬಣ್ಣಿಸಿದರು.
ಒಬಿಸಿ ಮೋರ್ಚಾ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಧಕರಾದ ಅತಿಕ್ ಶೆಟ್ಟಿ ಹಾಗೂ
ಶ್ರೀರಕ್ಷಾ ಎಸ್. ಎಚ್.ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಒಬಿಸಿ ಮೋರ್ಚಾದ ಪ್ರಭಾರಿ
ಸುಮಲತಾ ಅವರನ್ನು ಗೌರವಿಸಲಾಯಿತು.
ಪಕ್ಷದ ಪ್ರಮುಖರಾದ ಸುಮನ ಶೆಟ್ಟಿ ಮನೋಜ್ ಆಚಾರ್ಯ ನಾಣ್ಯ,
ಜಯಶ್ರೀ ಕರ್ಕೆರಾ, ದಯಾನಂದ ತೊಕ್ಕೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಓಬಿಸಿ ಮಂಡಲಪ್ರಬಾರಿ ಸುಮಲತಾ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಕಣಿರ್ ತೋಟ ವಂದಿಸಿದರು.
ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು
Advertisement







