
ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾ ನಗರದಲ್ಲಿರುವ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಮಹೋತ್ಸವ ಅ.11 ರಂದು ಆರಂಭಗೊಂಡಿದ್ದು ಅ.20 ರವೆರೆಗೆ ನಡೆಯಲಿದೆ.
ಉತ್ಸವದ ಅಂಗವಾಗಿ ನವರಾತ್ರಿ ಮಹಾಪೂಜೆ, ನವರಾತ್ರಿ ಭಜನಾ ಸೇವೆ, ಹೂವಿನ ಪೂಜೆ, ದುರ್ಗಾನಮಸ್ಕಾರ ಮತ್ತಿತರ ಸೇವೆಗಳು ನಡೆಯಲಿದೆ. ಅ.19 ರಂದು ಸಂಜೆ 5 ರಿಂದ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಸುದರ್ಶನ್ ಬಳ್ಳಾಲ್ ನೇತೃತ್ವದಲ್ಲಿ ನಡೆಯಲಿದೆ. ಭಜನೆ ಮಂಗಳದ ಬಳಿಕ ನವರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ.20 ರಂದು ಬೆಳಿಗ್ಗೆ 8 ಕ್ಕೆ ಶ್ರೀ ದೇವಿಗೆ ಪೂಜೆ ನಡೆದು ವಾಹನ ಪೂಜೆ ನಡೆಯಲಿದೆ. ರಾತ್ರಿ 8.30 ಕ್ಕೆ ಭಜನೆ, ಭಜನೆ ಮಂಗಳದ ಬಳಿಕ ನವರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.30ಕ್ಕೆ ವೇಷಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.



Advertisement







