
ಬಂಟ್ವಾಳ: ಅಮ್ಟಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸಭಾಭವನ ಹಾಗೂ ವಾಣಿಜ್ಯ ಕಟ್ಟಡ ಉದ್ಘಾಟನೆ ಹಾಗೂ ಮಹಾಸಭೆಯು ಸಂಘದ ಅಧ್ಯಕ್ಷ ಉದಯ ಕುಮಾರ್ ಅಜೆಕಲ ಅಧ್ಯಕ್ಷತೆಯಲ್ಲಿ ನಡೆಯಿತು.
ದ. ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸುಧಾಕರ ರೈ ಬೋಳಂತೂರು ನೂತನ ಸಭಾ ಭವನ ಉದ್ಘಾಟಿಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ಪೂರಕವಾಗಿರುವ ನೂತನ ಸಭಾಭವನವು ಹಾಲು ಉತ್ಪಾದಕರ ಸಭೆಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ವಿವಿಧ ಸಹಕಾರ ಚಟುವಟಿಕೆಗಳಿಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಉದಯ್ ಕುಮಾರ್ ಅಜೆಕಲ ಹಿರಿಯ ಹೈನುಗಾರರ ಪರಿಶ್ರಮ ಹಾಗೂ ಆಡಳಿತ ಮಂಡಳಿಯ ಸತತ ಪ್ರಯತ್ನ ಒಕ್ಕೂಟದ ಹಾಗೂ ಇಲಾಖೆಯ ಸಹಕಾರ ವನ್ನು ಸ್ಮರಿಸಿದರು. ಸಭೆಯಲ್ಲಿ ದ ಕ. ಹಾಲು ಒಕ್ಕೂಟದ ನಿರ್ದೇಶಕ ಸುಧಾಕರ ರೈ ಬೋಳಂತೂರು ಉಪ ವ್ಯವಸ್ಥಾಪಕಿ ಜಾನೆಟ್ ರೋಸಾರಿಯೋ ಹಾಗೂ ವಿಸ್ತರಾಣಾಧಿಕಾರಿ ಪ್ರಫುಲ್ಲ
ಅವರನ್ನು ಸನ್ಮಾನನಿಸಲಾಯಿತು. ಹಿರಿಯ ಸದಸ್ಯರಾದ ಸಿರಿಲ್ ಅಲ್ಮೆಡಾ ಹಾಗೂ
ಜೋಸೆಫ್ ಡಿ ಸೋಜ ರವರನ್ನು ಗೌರವಿಸಲಾಯಿತು. ಬಳಿಕ ನಡೆದ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಸಂಘವು 2025-26 ನೇ ಸಾಲಿನಲ್ಲಿ 2.5ಕೋಟಿ ವಹಿವಾಟು ನಡೆಸಿದ್ದು ರೂ.7.5 ಲಕ್ಷ ನಿವ್ವಳ ಲಾಭ ಗಳಿಸಿ ಶೇ 15 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಹಾಲು ಹಾಕುವ ಸದಸ್ಯರಿಗೆ ಶೇ. 65 ವಾರ್ಷಿಕ ಬೋನಸ್ ಹಾಗೂ ಬಹುಮಾನ ನೀಡಲಾಯಿತು.
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುವ ೩ ಸದಸ್ಯರಿಗೆ ಬಹುಮಾನ ಹಾಗೂ ಎಸ್.ಎಸ್. ಎಲ್. ಸಿ ಹಾಗೂ ಪಿ.ಯು.ಸಿ ಯ ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ ನಿರ್ದೇಶಕ, ಕರುಣಾಕರ ಶೆಟ್ಟಿ, ಸಿರಿಲ್ ಅಲ್ಮೆಡಾ, ಯಶವಂತ ಶೆಟ್ಟಿ, ಅನಿಲ್ ಹೆರಾಲ್ಡ್ ಫ್ರಾಂಕ್, ಬೇಬಿ ಶೆಟ್ಟಿ, ಜೋಸೆಫ್ ಡಿ ಸೋಜ, ಕೇಶವ ಜೋಗಿ , ಫ್ಲೋರಿನ್, ವಸಂತಿ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸತೀಶ್ ರೈ ವಂದಿಸಿದರು ಹಾಲು ಪರೀಕ್ಷಕಿ ವೀಣಾ ಐಡಾ ಲೋಬೊ ಸಹಕರಿಸಿದರು.
Advertisement







