
ಬಂಟ್ವಾಳ :ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಇದರ ಆಶ್ರಯದಲ್ಲಿ ನಡೆಯುವ 44ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಾಲೋಚನಾ ಸಭೆಯು ಭಾನುವಾರ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು. ಈ ಸಂದರ್ಭ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಉಪನ್ಯಾಸಕಿ ಕೆ.ಕವಿತಾ ದೇವದಾಸ ಅರ್ಕುಳ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದು ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವುದು ಪ್ರಥಮವಾಗಿದೆ.
ಕೆ.ಕವಿತಾ ದೇವದಾಸ ಅರ್ಕುಳ ಇವರು
ಕಳೆದ 33ವರ್ಷಗಳಿಂದ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಲೆಕ್ಕ ಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ವಾಣಿಜ್ಯ ಉಪನ್ಯಾಸಕರ ಸಂಘದ ಕೋಶಾಧಿಕಾರಿಯಾಗಿ, ಫರಂಗಿಪೇಟೆ ಅಂಜನಾದೇವಿ ಮಾತೃ ಮಂಡಳಿಯ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಸೇವಾಂಜಲಿ ಪ್ರತಿಷ್ಠಾನದ ಸದಸ್ಯರಾಗಿ ಇಲ್ಲಿ ನಡೆಯುವ ಶ್ರೀ ವರಮಾಲಕ್ಷ್ಮೀ ಪೂಜೆ ಸಹಿತ ಎಲ್ಲಾ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ನಾಯಕತ್ವ ಗುಣ, ಸಮಾಜಮುಖಿ ಸೇವೆಯಿಂದಾಗಿ ಮಹಿಳೆಯೊಬ್ಬರು ಪ್ರಥಮ ಭಾರಿಗೆ ಫರಂಗಿಪೇಟೆ ಗಣೆಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದಾರೆ.


Advertisement







