
ಬಂಟ್ವಾಳ: ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಬಬಿತ ಗಣೇಶ್ ಕುಲಾಲ್ ಇವರಿಗೆ ಮಾಹೆ ( Manipal Academy of Higher Education) ಯಿಂದ ಡಾಕ್ಟರೇಟ್ ಪದವಿ ದೊರಕಿದೆ.
ಇವರು ಡಾ. ಶ್ವೇತಾ ವಿನ್ಸೆಂಟ್ , ಸಮೀನಾ ಪಟಾಣ್, ಮತ್ತು ಗಣೇಶ್ ಭಟ್ ರವರ ಮಾರ್ಗದರ್ಶನದಲ್ಲಿ ‘Machine Learning based Landslide based Susceptibility Mapping for the portion of Western Ghats in the state of Karnataka, India’ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿರುತ್ತಾರೆ. ಇವರಿಗೆ ಕಳೆದ ವರ್ಷ ಸೆಪ್ಟೆಂಬರ್ 27-28ರಂದು ದುಬೈ ನಲ್ಲಿ ನಡೆದ ಕಾನ್ಫರೆನ್ಸ್ ನಲ್ಲಿ ‘ಬೆಸ್ಟ್ ಕಾನ್ಫರೆನ್ಸ್ ಪೇಪರ್ ‘ಅವಾರ್ಡ್’ ಕೂಡ ಬಂದಿರುತ್ತದೆ. ಇವರು ವಾಮಂಜೂರಿನ ದಿ. ಗೋಪಾಲ್ ಬಂಗೇರ ಮತ್ತು ಲಕ್ಷ್ಮಿಯವರ ಪುತ್ರಿ ಮತ್ತು ಮೊಡಂಕಾಪುವಿನ ಗಣೇಶ್ ಕೃಷ್ಣಪ್ಪ ಕುಲಾಲ್ ಅವರ ಪತ್ನಿ.


Advertisement







